ಅಬಕಾರಿ ಸುಂಕಕ್ಕೆ ಸಮನಾಗಿ ತೆರಿಗೆ ಕಡಿತ ಮಾಡಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ: ಸಿದ್ದರಾಮಯ್ಯ ಕಿಡಿ

Prasthutha|

ಬೆಂಗಳೂರು: ಅಬಕಾರಿ ಸುಂಕಕ್ಕೆ ಸಮನಾಗಿ ತೆರಿಗೆ ಕಡಿತ ಮಾಡಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಇಂಧನದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಇಳಿಕೆಯ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಇಳಿಕೆಯ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲಿದ್ದ ಅಬಕಾರಿ ಸುಂಕಕ್ಕೆ ಸಮನಾಗಿ ತೆರಿಗೆ ಕಡಿತ ಮಾಡಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯು.ಪಿ.ಎ ಸರ್ಕಾರದ ಕೊನೆ ಅವಧಿಯಲ್ಲಿ (2014ರ ಆರಂಭದಲ್ಲಿ) ಡೀಸೆಲ್ ಮೇಲೆ ರೂ.3.45 ಹಾಗೂ ಪೆಟ್ರೋಲ್ ಮೇಲೆ ರೂ.9.20 ಅಬಕಾರಿ ಸುಂಕ ಇತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಡೀಸೆಲ್ ಮೇಲೆ ರೂ. 31.84 ಹಾಗೂ ಪೆಟ್ರೋಲ್ ಮೇಲೆ ರೂ. 32.98 ಗೆ ತೆರಿಗೆ ಏರಿಸಲಾಗಿತ್ತು ಎಂದು ಅವರು ಕಿಡಿಕಾರಿದ್ದಾರೆ.

- Advertisement -

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಒಂದರಲ್ಲೇ ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ 23 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ. ಕೊರೊನಾ ಆರ್ಭಟದ ನಂತರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಜನ ಸಾಮಾನ್ಯರಿಗೆ ಈ ತೆರಿಗೆ ಕಡಿತ ಕೊಂಚ ನಿರಾಳತೆ ಉಂಟುಮಾಡಿದೆ. ಆದರೆ ಪೂರ್ಣ ಪ್ರಮಾಣದ್ದಲ್ಲ ಎಂದು ಗುಡುಗಿದ್ದಾರೆ.

Join Whatsapp