ರಾಜ್ಯ ಸರಕಾರ, ರಾಜ್ಯಪಾಲರ ವಿರುದ್ಧ ಎಂವಿಎ ಪ್ರತಿಭಟನೆ: ಉದ್ಧವ್, ಅಜಿತ್ ಪವಾರ್ ಭಾಗಿ

Prasthutha|

ಮುಂಬೈ: ಮುಂಬೈಯಲ್ಲಿ ರಾಜ್ಯ ಸರಕಾರ ಮತ್ತು ರಾಜ್ಯಪಾಲರ ವಿರುದ್ಧ ಎಂವಿಎ- ಮಹಾರಾಷ್ಟ್ರ ವಿಕಾಸ ಅಘಾಡಿ ನಡೆಸಿದ ಪ್ರತಿಭಟನೆಯಲ್ಲಿ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ, ಎನ್’ಸಿಪಿ ನಾಯಕ ಅಜಿತ್ ಪವಾರ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.  

- Advertisement -

ಮಹಾರಾಷ್ಟ್ರದ ಶಿಂಧೆ ಸರಕಾರ ಮತ್ತು ರಾಜ್ಯಪಾಲ ಬಿ. ಎಸ್. ಕೋಶಿಯಾರಿಯವರು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅಸಂಬದ್ಧವಾಗಿ ಮಾತನಾಡಿದ್ದಾರೆ ಎಂದು ಪ್ರತಿಭಟನೆಯಲ್ಲಿ ಸರಕಾರದ ಭ್ರಷ್ಟ ನಡೆಯನ್ನು ಟೀಕಿಸಲಾಯಿತು. ಈ ಪ್ರತಿಭಟನೆಯಲ್ಲಿ ಮಹಾರಾಷ್ಟ್ರ- ಕರ್ನಾಟಕದ ಗಡಿ ವಿವಾದ ಕೂಡ ಪ್ರಸ್ತಾಪವಾಯಿತು.

ಇದೇ ವೇಳೆ ಬಿಜೆಪಿಯು ದೇಶದ ನಾನಾ ಕಡೆ ಬಿಲಾವಲ್ ಭುಟ್ಟೋ ಅವರ ಗುಜರಾತ್ ಕಟುಕ ಇನ್ನೂ ಬದುಕಿದ್ದಾನೆ ಎಂಬ ಹೇಳಿಕೆಯ ವಿರುದ್ಧ ಪ್ರತಿಭಟನೆ ನಡೆಸಿತು.  

- Advertisement -

ಆಂಧ್ರ ಪ್ರದೇಶದಲ್ಲಿ ಇದೇ ವೇಳೆ ಹಿಂಸಾತ್ಮಕ ಪ್ರತಿಭಟನೆ ವರದಿಯಾಗಿದೆ. ಆಂಧ್ರದ ಪಲ್ನಾಡು ಜಿಲ್ಲೆಯ ಮಾಚೆರ್ಲದಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ಆಳುವ ವೈಎಸ್’ಆರ್ ಕಾಂಗ್ರೆಸ್ ಪಕ್ಷ ಮತ್ತು ವಿರೋಧ ಪಕ್ಷವಾದ ತೆಲುಗು ದೇಶಂ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸದ್ಯ 144ನೇ ಸೆಕ್ಷನ್ ಜಾರಿ ಮಾಡಲಾಗಿದೆ. 



Join Whatsapp