ಮುಸ್ಲಿಮರೇ ಮೂರು ದೇಗುಲ ಬಿಟ್ಟುಕೊಡಿ ಇಲ್ಲದಿದ್ದರೆ 37 ಸಾವಿರ ಕಡೆ ಹೋರಾಟ ನಡೆಸಬೇಕಾಗುತ್ತೆ: ಚಕ್ರವರ್ತಿ ಸೂಲಿಬೆಲೆ

Prasthutha|

►ಮೋಹನ್ ಭಾಗವತ್ ಹೇಳಿಕೆ ಬೆನ್ನಲ್ಲೇ ತದ್ವಿರುದ್ಧ ಹೇಳಿಕೆ ನೀಡಿದ ಸೂಲಿಬೆಲೆ

- Advertisement -

ಬೆಂಗಳೂರು: ಹಿಂದೂಗಳು ಕೇಳಿರುವುದು ಕೇವಲ ಮೂರು ದೇವಸ್ಥಾನಗಳು. ಅದನ್ನು ಬಿಟ್ಟುಕೊಡದಿದ್ದರೆ ಹಿಂದೂಗಳು 37 ಸಾವಿರ ದೇವಸ್ಥಾನಗಳ ಬಿಡುಗಡೆಗಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಆರೆಸ್ಸೆಸ್ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.


ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ ಎಂಬ ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಗೆ ತದ್ವಿರುದ್ಧವಾಗಿ ಪ್ರತಿಕ್ರಿಯಿಸಿರುವ ಅವರು, ಭಾಗವತ್ ಅವರು ಹಿಂದೂ ಧರ್ಮಕ್ಕೆ ಸೂಕ್ತವಾದ ಹೇಳಿಕೆಯನ್ನೇ ಕೊಟ್ಟಿದ್ದಾರೆ. ಮುಸಲ್ಮಾನರು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕಿದೆ. ಕೋರ್ಟ್ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ಮಾತು ಸರಿಯಿದೆ. ಮಾತುಕತೆ ಇಲ್ಲದೆ ಕೋರ್ಟ್ ಗೆ ಹೋಗುವುದು ಹಿಂದೂಗಳ ಸಂಪ್ರದಾಯವಲ್ಲ. ಇದನ್ನು ಸಂಚಾಲಕರು ಸಹ ಬಹಳ ಸ್ಪಷ್ಟವಾಗಿಯೇ ಹೇಳಿದ್ದಾರೆ ಎಂದು ಹೇಳಿದರು.

- Advertisement -


ಹಿಂದೂ ಸಮಾಜವು ಸದಾ ನ್ಯಾಯಾಲಯಗಳಿಗೆ ಗೌರವ ಕೊಟ್ಟಿದೆ. ಸಹಿಸಿಕೊಳ್ಳಲು ಆಗದ ಪರಿಸ್ಥಿತಿಯಲ್ಲಿ ಅಗ್ರೆಸಿವ್ ಆಗಿದ್ದಾರೆ. ಅದು ರಾಮಮಂದಿರ ವಿಚಾರದಲ್ಲಿ ಮಾತ್ರ. ನಿರಂತರವಾಗಿ ಬೆಳವಣಿಗೆಯಿಂದ ಬಿಟ್ಟು ಕೊಡುವ ಪ್ರಶ್ನೆ ಉಲ್ಬಣಿಸಿಲ್ಲ. ನಾವು ಕೋರ್ಟ್ ತೀರ್ಪು ಒಪ್ಪಿಕೊಳ್ಳುತ್ತೇವೆ. ಮಾತುಕತೆಗೆ ಮುಂದಾಗುವ ಪ್ರಕ್ರಿಯೆ ಮುಸಲ್ಮಾನರು ಆರಂಭಿಸಬೇಕು ಎಂದರು.



Join Whatsapp