ತರಾವೀಹ್ ನಮಾಝ್ ನಿರ್ವಹಿಸಿದ ಮುಸ್ಲಿಮರಿಗೆ ತಲಾ 5 ಲಕ್ಷ ರೂ. ದಂಡ !

Prasthutha|

ಲಕ್ನೋ: ಖಾಸಗಿ ಜಾಗದಲ್ಲಿ ರಮಝಾನ್’ನ ವಿಶೇಷ ನಮಾಝ್ ತರಾವೀಹ್ ನಿರ್ವಹಿಸಿದ್ದಕ್ಕೆ ಮುಸ್ಲಿಮರಿಗೆ ತಲಾ 5 ಲಕ್ಷ ರೂ. ದಂಡ ವಿಧಿಸಲಾಗಿದೆ.

- Advertisement -


ಉತ್ತರ ಪ್ರದೇಶದ ಮೊರಾದಾಬಾದ್’ನ ಖಾಸಗಿ ಗೋದಾಮಿನಲ್ಲಿ ಶನಿವಾರ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರ ವಿರುದ್ಧ ಬಜರಂಗದಳ ಪ್ರತಿಭಟನೆ ನಡೆಸಿದ ನಂತರ ಉತ್ತರ ಪ್ರದೇಶ ಪೊಲೀಸರು ಸಿಆರ್ ಪಿಸಿ 107/116 ಅಡಿಯಲ್ಲಿ 10 ಮಂದಿ ಮುಸ್ಲಿಮರಿಗೆ ನೋಟಿಸ್ ನೀಡಿದ್ದು, ಯಾವುದೇ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಮುಸ್ಲಿಂ ಕುಟುಂಬಕ್ಕೆ ಸೂಚನೆ ನೀಡಿದ್ದಾರೆ.


ಈ ಪ್ರದೇಶದಲ್ಲಿ ಶಾಂತಿ ಕದಡಿದ್ದಕ್ಕಾಗಿ ಮುಸ್ಲಿಂ ಸಮುದಾಯದ ಸದಸ್ಯರು ತಲಾ 5 ಲಕ್ಷ ರೂ.ಗಳ ದಂಡವನ್ನು ಏಕೆ ಪಾವತಿಸಬಾರದು ಎಂದು ನೋಟಿಸ್’ನಲ್ಲಿ ಪೊಲೀಸರು ಪ್ರಶ್ನಿಸಿದ್ದಾರೆ.
ಮೊರಾದಾಬಾದ್’ನ ಲಜಪತ್ ನಗರದಲ್ಲಿರುವ ಝಾಕೀರ್ ಹುಸೇನ್ ಎಂಬವರು ತಮ್ಮ ಗೋದಾಮಿನಲ್ಲಿ ರಮಝಾನ್ ರಾತ್ರಿಗಳಲ್ಲಿ ಮುಸ್ಲಿಮರು ನಿರ್ವಹಿಸಬೇಕಾದ ಸಾಮೂಹಿಕ ಪ್ರಾರ್ಥನೆಯಾಗಿದ್ದ ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದಾಗ ಶನಿವಾರ ಬಜರಂಗದಳದ ರಾಜ್ಯಾಧ್ಯಕ್ಷ ರೋಹನ್ ಸಕ್ಸೇನಾ ಮತ್ತು ಹಿಂದುತ್ವ ಸಂಘಟನೆಯ ಸದಸ್ಯರು ಅಲ್ಲಿಗೆ ನುಗ್ಗಿ ನಮಾಝ್ ತಡೆದಿದ್ದರು. ಮಾತ್ರವಲ್ಲ ಇಲ್ಲಿ ಇಂತಹ ಯಾವುದೇ ಸಾಮೂಹಿಕ ನಮಾಝ್ ನಿರ್ವಹಿಸಬಾರದು ಎಂದು ಎಚ್ಚರಿಸಿ ಪೊಲೀಸರಿಗೆ ದೂರು ನೀಡಿದ್ದರು.

- Advertisement -


“ಯಾವುದೇ ವ್ಯಕ್ತಿಯು ನಮಾಝ್, ತರಾವೀಹ್ ಅಥವಾ ಪೂಜಾ ಪಾತ್ ಮಾಡುತ್ತಿದ್ದರೆ, ಬೇರೆಯವರಿಗೆ ಅದರ ಬಗ್ಗೆ ಯಾವುದೇ ಆಕ್ಷೇಪಣೆ ಇರಬಾರದು. ಯಾರಾದರೂ ಇಂತಹ ಚಟುವಟಿಕೆಗಳಲ್ಲಿ ತೊಡಗಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಮೊರಾದಾಬಾದ್ ಎಸ್ ಎಸ್’ಪಿ ಹೇಮರಾಜ್ ಮೀನಾ ಹೇಳಿದ್ದಾರೆ.
ಪೊಲೀಸರು ಮುಸ್ಲಿಮರಿಗೆ ನೋಟಿಸ್ ಕಳುಹಿಸಿದರೂ, ಅವರು ಇತರರ ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ತಿಳಿಸಿದ್ದಾರೆ.



Join Whatsapp