ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ಮುಸ್ಲಿಮರು

Prasthutha|

ಮೈಸೂರು: ಹಿಂದೂ ಮಹಿಳೆಯೊಬ್ಬರ ಶವ ಸಂಸ್ಕಾರವನ್ನು ಮುಸಲ್ಮಾನರು ನೆರವೇರಿಸಿದ ಘಟನೆಯೊಂದು ಜಿಲ್ಲೆಯ ಬನ್ನಿಮಂಟಪದಲ್ಲಿ ನಡೆದಿದೆ.

- Advertisement -

ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಶಿವಮ್ಮ ಎಂಬ ಮಹಿಳೆಯು ಮರಣ ಹೊಂದಿದ್ದು, ಅವರ ಮಕ್ಕಳು, ಸಂಬಂಧಿಕರು ಯಾರೂ ಅವರ ಬಳಿ ಬಾರದ ಕಾರಣ ಸ್ಥಳೀಯ ಮುಸ್ಲಿಮರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಹೆಗಲು ಕೊಟ್ಟು ಮಹಿಳೆಯ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ.

- Advertisement -

ಹಿಂದೂ ಧರ್ಮದ ಸಂಪ್ರದಾಯದಂತೆ ಪೂಜೆಗಳ ಮೂಲಕ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಶವ ಸಂಸ್ಕಾರದ ಎಲ್ಲಾ ಕೆಲಸ ಕಾರ್ಯಗಳು ಮುಗಿಯುವವರೆಗೆ ಆ ಮುಸ್ಲಿಂ ಬಾಂಧವರು ರುದ್ರ ಭೂಮಿಯಲ್ಲೇ ಇದ್ದರು ಎನ್ನಲಾಗಿದೆ.

Join Whatsapp