ಮುಸ್ಲಿಂ, ಕ್ರಿಶ್ಚಿಯನ್ ನನ್ನ ಪರ ಮತ ಚಲಾಯಿಸುವ ಭರವಸೆ ನೀಡಿದ್ದಾರೆ: ಕೆಎಸ್ ಈಶ್ವರಪ್ಪ

Prasthutha|

ಶಿವಮೊಗ್ಗ: ತನಗೆ ಕೇವಲ ಹಿಂದೂಗಳ ಬೆಂಬಲವಲ್ಲದೆ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಬೆಂಬಲ ಸಹ ಇದೆ ಎಂದು ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಹೇಳಿದರು.

- Advertisement -

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತಾನು ಹಿಂದೂತ್ವವಾದಿಯೇ ಹೊರತು ಮುಸಲ್ಮಾನರನ್ನು ದ್ವೇಷಿಸುವ ವ್ಯಕ್ತಿ ಅಲ್ಲ, ಆ ಸಮುದಾಯದ ಒಂದಷ್ಟು ಗೂಂಡಾಗಳ ಬಗ್ಗೆ ಮಾತ್ರ ತನಗೆ ಕೋಪವಿದೆ ಎಂದು ಈಶ್ವರಪ್ಪ ಹೇಳಿದರು.


ಸಾಗರದಿಂದ ಲೋಬೋ ಹೆಸರಿನ ವ್ಯಕ್ತಿ ಫೋನ್ ಮಾಡಿ ತಮ್ಮ ಸಮುದಾಯದ ಪಾದ್ರಿಗಳೆಲ್ಲ ನಿಮ್ಮನ್ನು ಆಶೀರ್ವದಿಸಿದ್ದಾರೆ ಅಂತ ಹೇಳಿದ್ದಾರೆ ಮತ್ತು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿರುವ ರಿಚರ್ಡ್ ಎನ್ನುವವರು ಒಮ್ಮೆ ಮನೆಗೆ ಮನೆಗೆ ಬಂದು ಹೋಗಿ ಅಂತ ಹೇಳಿದ್ದು, ತಮ್ಮ ಎಲ್ಲ ಪರಿಚಯಸ್ಥರಿಗೆ ನಿಮಗೆ ಮಾತ್ರ ವೋಟು ಹಾಕಬೇಕೆಂದು ಹೇಳುತ್ತೇನೆ ಎಂದಿದ್ದಾರೆ ಎಂದು ಮಾಜಿ ಸಚಿವ ಹೇಳಿದರು.

- Advertisement -


ರಾಜ್ಯದ 27 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಮತ್ತು 28 ನೇ ಸ್ಥಾನವನ್ನು ತಾನು ಗೆದ್ದು ದೆಹಲಿಯಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಮಂತ್ರಿಯಾಗಬೇಕೆಂದು ಕೈ ಎತ್ತುವುದಾಗಿ ಈಶ್ವರಪ್ಪ ಹೇಳಿದರು.

Join Whatsapp