‘ಸರ್ಕಾರದ ಅಣತಿಯಂತೆ ಮುಸ್ಲಿಮರು ಮತ್ತು ದಲಿತರನ್ನು ಕೊಲ್ಲಲಾಗುತ್ತಿದೆ’: ಯುಪಿ ಸರ್ಕಾರದ ವಿರುದ್ಧ ಮಾಜಿ ಅಧಿಕಾರಿಗಳಿಂದ ಪತ್ರ

Prasthutha|

ಲಕ್ನೋ: ಉತ್ತರಪ್ರದೇಶದಲ್ಲಿ ಸರ್ಕಾರದ ಅಣತಿಯಂತೆ ಮುಸ್ಲಿಮರು ಮತ್ತು ದಲಿತರನ್ನು ಕೊಲ್ಲಲಾಗುತ್ತಿದೆ ಎಂದು ಮಾಜಿ ಉನ್ನತ ಅಧಿಕಾರಿಗಳು ಪತ್ರ ಬರೆದಿದ್ದಾರೆ.

- Advertisement -

ಆಡಳಿತದ ವೈಫಲ್ಯ ಮತ್ತು ಕಾನೂನಿನ ನಿಯಮದ ನಿರ್ಲಜ್ಜ ಉಲ್ಲಂಘನೆಗಳ ಬಗ್ಗೆ ನಿವೃತ್ತ ಉನ್ನತ ಅಧಿಕಾರಿಗಳು ಈ ಬಹಿರಂಗ ಪತ್ರ ಬರೆದಿದ್ದಾರೆ. ದಶಕಗಳಿಂದ ಸೇವೆ ಸಲ್ಲಿಸಿದ ಮತ್ತು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲದ 87 ಮಾಜಿ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ನಿವೃತ್ತ ಅಧಿಕಾರಿಗಳು ಬರೆದ ಈ ಪತ್ರವನ್ನು ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 236 ಅಧಿಕಾರಿಗಳು ಬೆಂಬಲಿಸಿದ್ದಾರೆ. ಉತ್ತರಪ್ರದೇಶ ಸರ್ಕಾರವು ಈಗ ಸಾಂವಿಧಾನಿಕ ಮೌಲ್ಯಗಳು ಮತ್ತು ಕಾನೂನಿನ ನಿಯಮಗಳಿಂದ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲಾಧಿಕಾರಿಗಳು, ಪೊಲೀಸರು ಸೇರಿದಂತೆ ಸರ್ಕಾರದ ಎಲ್ಲಾ ಶಾಖೆಗಳು ಹದಗೆಟ್ಟಿವೆ. ಕಾನೂನಿನ ಈ ವೈಫಲ್ಯವನ್ನು ತಡೆಯದಿದ್ದರೆ ಪ್ರಜಾಪ್ರಭುತ್ವದ ನಾಶಕ್ಕೆ ಕಾರಣವಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

- Advertisement -

2017 ಮತ್ತು 2020 ರ ನಡುವೆ ನಡೆದ ‘ಎನ್‌ಕೌಂಟರ್’ ಕೊಲೆಗಳಲ್ಲಿ 124 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಮುಸ್ಲಿಮರು, ದಲಿತರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಆಗಸ್ಟ್ 2020 ರವರೆಗೆ ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಮುಸ್ಲಿಮರು ಎಂಬ ಅಂಶವು ಭಯಾನಕ ಸಂದೇಶವನ್ನು ರವಾನಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತದ ಮೊದಲ ಮೂರು ವರ್ಷಗಳ ಅವಧಿಯಲ್ಲಿ ಪ್ರತಿ ಐದು ಗಂಟೆಗಳಲ್ಲಿ ಒಂದು ‘ಎನ್ಕೌಂಟರ್’ ನಡೆದಿದೆ.



Join Whatsapp