ದೆಹಲಿ: 16 ಮಸೀದಿಗಳಲ್ಲಿ ಶುಕ್ರವಾರದ ನಮಾಝ್ ನಿರ್ವಹಣೆಗೆ ಪೊಲೀಸರಿಂದ ತಡೆ

Prasthutha|

ನವದೆಹಲಿ: ಮಾರ್ಚ್ 18 ರಂದು ಮುಸ್ಲಿಮರು – ಹಿಂದೂಗಳು ಕ್ರಮವಾಗಿ ಜುಮಾ, ಶಬ್ ಎ ಬರಾಅತ್ ಮತ್ತು ಹೋಳಿಯನ್ನು ಪ್ರತ್ಯೇಕವಾಗಿ ಆಚರಿಸಿದ್ದು, ಐತಿಹಾಸಿಕ ಪಂಚಶೀಲ್ ಎನ್ ಕ್ಲೇವ್ ಮಸೀದಿಯೆಂದೇ ಖ್ಯಾತಿಯ ಪುರಾತನ ಲಾಲ್ ಗುಂಬಝ್ ಸೇರಿದಂತೆ 16 ಮಸೀದಿಗಳಲ್ಲಿ ಶುಕ್ರವಾರದ ನಮಾಝ್ ನಿರ್ವಹಿಸದಂತೆ ಪೊಲೀಸರು ತಡೆದಿದ್ದಾರೆ ಎಂದು ಮುಸ್ಲಿಮರು ಆರೋಪಿಸಿದ್ದಾರೆ.

- Advertisement -

ಸುಮಾರು 500 ವರ್ಷಗಳಷ್ಟು ಹಳೆಯದಾದ ಮಸೀದಿಯು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಅಡಿಯಲ್ಲಿ ಅತ್ಯಂತ ಸುರಕ್ಷಿತ ಸ್ಮಾರಕವಾಗಿದೆ.

ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಲಾಲ್ ಗುಂಜಝ್ ಮಸೀದಿಯ ಇಮಾಮ್ ನಿಯಾಝ್ ಅಹ್ಮದ್, ನಾನು 1980 ರಿಂದ ಇಲ್ಲಿ ವಾಸಿಸುತ್ತಿದ್ದೇನೆ ಮತ್ತು 2000 ರ ದಶಕದಲ್ಲಿ ಈ ಮಸೀದಿಯ ಇಮಾಮ್ ಆಗಿ ಸೇವೆ ಆರಂಭಿಸಿದ್ದು, ಈ ರೀತಿಯ ಹಿಂದೆಂದೂ ನಡೆದಿರಲಿಲ್ಲ ಎಂದು ತಿಳಿಸಿದ್ದಾರೆ.

- Advertisement -

ಕಳೆದ ನಲ್ವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರದ ನಮಾಝ್ ಅನ್ನು ತಡೆಯಲಾಗಿದೆ ಎಂದು ಇಮಾಮ್ ಅಹ್ಮದ್ ಅವರು ವಿಷಾದಿಸಿದ್ದಾರೆ. ದೆಹಲಿ ಪೊಲೀಸರ ಈ ರೀತಿಯ ನಡೆಯ ಕುರಿತು ಹಿರಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಗಳು ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಸಹಾಯಕ ಇನ್ಸ್‌ಪೆಕ್ಟರ್ ಮತ್ತು ಇತರ ನಾಲ್ಕೈದು ಮಂದಿ ಅಧಿಕಾರಿಗಳು ಮಸೀದಿಯ ಗೇಟನ್ನು ಬಂದ್ ಮಾಡಿ ಮಸೀದಿ ಪ್ರವೇಶಿಸದಂತೆ ಮತ್ತು ನಮಾಝ್ ನಿರ್ವಹಿಸದಂತೆ ತಡೆಯುತ್ತಿದ್ದರು ಎಂದು ನೆರೆದವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ AIMIM ದೆಹಲಿ ರಾಜ್ಯಾಧ್ಯಕ್ಷ ಕಲೀಮುಲ್ ಹಫೀಝ್ ಮಾಧ್ಯಮದೊಂದಿಗೆ ಮಾತನಾಡುತ್ತಾ, ಮುಸ್ಲಿಮರನ್ನು ಜುಮಾ ಸಭೆಯ ಪ್ರಾರ್ಥನೆಯನ್ನು ನೀಡುವುದನ್ನು ತಡೆಯುವುದು ನಮ್ಮ ಮೂಲಭೂತ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಕಿಡಿಕಾರಿದ್ದಾರೆ.

ದೆಹಲಿಯ 16 ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ನಿಲ್ಲಿಸಲು ಯಾರು ಆದೇಶ ನೀಡಿದ್ದಾರೆ ಎಂಬುದಕ್ಕೆ ದೆಹಲಿ ಪೊಲೀಸರು ಉತ್ತರವನ್ನು ನೀಡಬೇಕಾಗಿದೆ. ಅಮಿತ್ ಶಾ ಅಥವಾ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಪೊಲೀಸರು ಉತ್ತರ ನೀಡಬೇಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.



Join Whatsapp