ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಯುವಕರು

Prasthutha|

ಗುವಾಹಟಿ: ನುನ್ಮತಿ ನಿಜ್ರಾಪರ್ ಪ್ರದೇಶದಲ್ಲಿ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಕೆಲವು ಮುಸ್ಲಿಂ ಯುವಕರು ನೆರವೇರಿಸುವ ಮೂಲಕ ಮಾದರಿಯಾಗಿದ್ದಾರೆ.

- Advertisement -


ಗುವಾಹಟಿಯ ನಿಜರಪಾರ್ ನಿವಾಸಿ ಶಿವ ರತನ್ ಪಂಡಿತ್ (65) ಶುಕ್ರವಾರ ರಾತ್ರಿ ನಿಧನರಾದರು.

ಸ್ಥಳೀಯರ ಪ್ರಕಾರ, ಶಿವ ರತನ್ ಪಂಡಿತ್ ಹಲವು ವರ್ಷಗಳಿಂದ ನಗರದ ನಿಜರಪಾರ್ ಪ್ರದೇಶದಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ದೀರ್ಘಕಾಲದ ಅನಾರೋಗ್ಯದ ನಂತರ ವ್ಯಕ್ತಿ ನಿನ್ನೆ ಇದ್ದಕ್ಕಿದ್ದಂತೆ ನಿಧನರಾದರು. ಹಿಂದೂ ಧರ್ಮದ ಸಂಸ್ಕಾರದ ನಿಯಮಗಳು ತಿಳಿದಿಲ್ಲದ ಕಾರಣ ನೆರೆಹೊರೆಯವರಾಗಿದ್ದ ಮುಸ್ಲಿಮರು ಸುಮ್ಮನಾಗಿದ್ದರು. ಆದರೆ, ಮೃತದೇಹಕ್ಕೆ ರಾತ್ರಿ ಗ್ರಾಮದ ಮುಸ್ಲಿಂ ಸಮುದಾಯದವರು ರಕ್ಷಣೆ ಒದಗಿಸಿದ್ದರು. ಅವರು ತಮ್ಮ ಪ್ರದೇಶದಿಂದ ದೂರದಲ್ಲಿರುವ ಹಿಂದೂಗಳನ್ನು ಸಹ ಸಂಪರ್ಕಿಸಿದರು. ಬೆಳಗ್ಗೆ ಕೆಲವು ಹಿಂದೂಗಳು ಸ್ಥಳಕ್ಕೆ ಬಂದರು. ನಂತರ ಬೆಳಗ್ಗೆ ಆಗಮಿಸಿದ ಕೆಲ ಹಿಂದೂಗಳ ನೆರವಿನಿಂದ ಉಭಯ ಧರ್ಮದವರು ನವಗ್ರಹ ಚಿತಾಗಾರಕ್ಕೆ ಶವವನ್ನು ಕೊಂಡೊಯ್ದರು. ನಂತರ ಎರಡು ಸಮುದಾಯಗಳು ಸಮ್ಮುಖದಲ್ಲಿ ಶಿವ ರತನ್ ಪಂಡಿತ್ ಅವರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದರು.