ಪ್ರವೀಣ್ ಶವ ಮೆರವಣಿಗೆ : ನಿಂತಿಕಲ್ ನಲ್ಲಿ ದುಷ್ಕರ್ಮಿಗಳಿಂದ ಮುಸ್ಲಿಮ್ ಯುವಕನ ಬೈಕ್ ಧ್ವಂಸ !

Prasthutha|

ಗಲಭೆ ನಡೆಸಲೆಂದೇ ದೂರದ ಮಾರ್ಗ ಬಳಸಿ ಶವ ಮೆರವಣಿಗೆ !

- Advertisement -

ಸರಕಾರಿ ಬಸ್ ಮೇಲೆ ಕಲ್ಲು, ಸಿಸಿಟಿವಿ ಧ್ವಂಸ !

ಬೆಳ್ಳಾರೆ : ಅಪರಿಚಿತರಿಂದ ನಿನ್ನೆ ರಾತ್ರಿ ಕೊಲೆಯಾಗಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಮೃತದೇಹ ಪುತ್ತೂರು ಆಸ್ಪತ್ರೆಯಿಂದ ಅವರ ಮನೆಯ ತನಕ ಮೆರವಣಿಗೆಯ ಮೂಲಕ ತರಲಾಗಿದೆ. ಇದೇ ವೇಳೆ ಶವ ಮೆರವಣಿಗೆ ವೀಕ್ಷಿಸಲು ಸೇರಿದ್ದ ಜನಸ್ತೋಮದ ವೀಡಿಯೋ ಮಾಡಿದ್ದಾರೆಂದು ಆರೋಪಿಸಿ ನಿಂತಿಕಲ್ಲು ಎಂಬಲ್ಲಿ ದುಷ್ಕರ್ಮಿಗಳು ಮುಸ್ಲಿಮ್ ಯುವಕನ ಬೈಕನ್ನು ಧ್ವಂಸಗೊಳಿಸಿದ್ದಾರೆ. ನಿಂತಿಕಲ್ಲಿನಲ್ಲಿರುವ ತನ್ನ ಕೋಳಿ ಅಂಗಡಿಯಲ್ಲಿ ನಿಂತುಕೊಂಡು ಮೆರವಣಿಗೆ ವೀಕ್ಷಿಸುತ್ತಿದ್ದ ಸುಲೈ ಎನ್ನುವ ವ್ಯಕ್ತಿಯ ಮೇಲೆ ಕೆಲ ಗೂಂಡಾಗಳು ಸುಲೈ ಅವರು ಜನರ ವೀಡಿಯೋ ಮಾಡುತ್ತಿದ್ದಾರೆಂದು ಆರೋಪಿಸಿ ಏಕಾ ಏಕಿ ದಾಳಿ ಮಾಡಿದ್ದು, ಅವರಿಂದ ತಪ್ಪಿಸಿಕೊಂಡು ಸುಲೈ ಓಡಿ ಹೋಗಿದ್ದು, ಆದರೆ ಗೂಂಡಾಗಳು ಅವರು ಬಿಟ್ಟು ಹೋಗಿದ್ದ ಅವರ ಬೈಕನ್ನು ಧ್ವಂಸಗೊಳಿಸಿದ್ದಾರೆ.

- Advertisement -

ಇದೇ ವೇಳೆ ದುಷ್ಕರ್ಮಿಗಳು ಒಂದು ಸರಕಾರಿ ಬಸ್ಸಿನ ಮೇಲೆ ಕೂಡಾ ಕಲ್ಲೆಸೆದ ಘಟನೆಯೂ ವರದಿಯಾಗಿದೆ. ಅಷ್ಟು ಮಾತ್ರವಲ್ಲ ನಿಂತಿಕಲ್ಲು ಪ್ರದೇಶದ ಕೆಲವೊಂದು ಸಿಸಿಟಿವಿಗಳನ್ನು ಕೂಡಾ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ.

ಗಲಭೆ ನಡೆಸುವ ಹುನ್ನಾರ ?

ಮೃತದೇಹವನ್ನು ಪುತ್ತೂರಿನಿಂದ ನೆಟ್ಟಾರು ವರೆಗೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ಪ್ರದೇಶದಲ್ಲಿ ಗಲಭೆಗೆ ಸಂಚು ಹೂಡಲಾಗಿತ್ತೇ ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ನೆಟ್ಟಾರಿಗೆ ಪುತ್ತೂರು – ಕುಂಬ್ರ ಮಾರ್ಗ ಸಮೀಪದ ರಸ್ತೆಯಾಗಿದ್ದು, ಆದರೆ ಶವ ಮೆರವಣಿಗೆ ಪುತ್ತೂರು – ಸವಣೂರು – ಕಾಣಿಯೂರು – ನಿಂತಿಕಲ್ಲು – ಬೆಳ್ಳಾರೆ ಮಾರ್ಗವಾಗಿ ನೆಟ್ಟಾರುವಿಗೆ ತರಲಾಗಿದೆ. ಈ ಮೂಲಕ ಎಷ್ಟರ ಮಟ್ಟಿಗೆ ದೂರ ಮಾರ್ಗವಿದೆಯೋ ಅದನ್ನು ಬಳಸಲಾಗಿದೆ. ಆ ಮೂಲಕ ಶಾಂತಿ ಕದಡಲು ವ್ಯವಸ್ಥಿತ ಸಂಚು ಹೂಡಲಾಗಿತ್ತು ಎನ್ನುವ ಅನುಮಾನ ಸ್ಥಳೀಯರದ್ದಾಗಿದೆ. ಇದೀಗ ನಿಂತಿಕಲ್ಲುವಿನಲ್ಲಿ ಬೈಕ್ ಧ್ವಂಸ, ಬಸ್ಸಿಗೆ ಕಲ್ಲು ಮತ್ತು ಸಿಸಿಟಿವಿ ಹಾನಿ ಘಟನೆಗಳು ಸಂಭವಿಸಿದೆ.



Join Whatsapp