ಕಳ್ಳತನ ಆರೋಪದಲ್ಲಿ ಮುಸ್ಲಿಮ್ ಯುವಕನ ಗುಂಪು ಹತ್ಯೆ

Prasthutha|

ಖಾಂಡ್ವಾ: ಕಳ್ಳತನ ಆರೋಪದಲ್ಲಿ ಮುಸ್ಲಿಮ್ ಯುವಕನೊಬ್ಬನನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಮಧ್ಯಪ್ರದೇಶದ ಖಾಂಡ್ವಾದ ಚೈಂಗೋನ್ ಮಖಾನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಚೈಗೋವನ್ ದೇವಿ ಗ್ರಾಮದಲ್ಲಿ ಕಳ್ಳತನದ ಶಂಕೆಯ ಮೇಲೆ ಮುಸ್ಲಿಂ ಯುವಕ ಶೇಖ್ ಫಿರೋಝ್ ಎಂಬವರ ಮೇಲೆ ಮಾರಣಾಂತಿಕ ದೈಹಿಕ ಹಲ್ಲೆ ನಡೆಸಲಾಗಿತ್ತು ಎಂದು ವರದಿಯಾಗಿದೆ.
ಹಲ್ಲೆಗೊಳಗಾದ ಶೇಖ್ ಫಿರೋಝ್ ಭಾನುವಾರ ಬೆಳಿಗ್ಗೆ ಚರಂಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ದುರದೃಷ್ಟವಶಾತ್, ಅವರು ಬದುಕುಳಿದಿಲ್ಲ ಎನ್ನಲಾಗಿದೆ.


ಖಾಂಡ್ವಾದ ಸುರ್ಗಾಂವ್ ಗ್ರಾಮದ ಮಾಜಿ ಪಂಚಾಯತ್ ಅಧ್ಯಕ್ಷ ಚಟರ್ ಪಟೇಲ್ ಮತ್ತು ಅವರ ಸಹಚರರು, ಫಿರೋಝ್ ಅವರನ್ನು ಥಳಿಸಿ ಕೊಂದಿದ್ದಾರೆ ಎಂದು ಅವರ ಸಂಬಂಧಿಕರು ದೂರಿದ್ದಾರೆ.
ಫಿರೋಝ್ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂದು ತಿಳಿದ ನಂತರ, ಅವರು ಪ್ರಜ್ಞೆ ತಪ್ಪುವವರೆಗೂ ಕ್ರೂರವಾಗಿ ಹಲ್ಲೆ ನಡೆಸಿ, ಒಳಚರಂಡಿ ಕಾಲುವೆಗೆ ಎಸೆದಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಸ್ಥಳೀಯರು ತನ್ನ ಮಗನನ್ನು ಥಳಿಸಿ ಕೊಂದಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಫಿರೋಝ್ ಅವರ ತಾಯಿ ಹೇಳಿದ್ದಾರೆ. ದಾಳಿಕೋರರು ಪತ್ತೆಯಾಗುವವರೆಗೂ, ಅವನ ಅಂತ್ಯಕ್ರಿಯೆಯ ವಿಧಿಗಳನ್ನು ನೆರವೇರಿಸುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

- Advertisement -


ಖಾಂಡ್ವಾದ ಖಾನ್ ಶಾವಲಿ ಮೂಲದ ಸಂತ್ರಸ್ತನಿಗೆ ಹಲವಾರು ಇರಿತದ ಗಾಯಗಳಾಗಿದ್ದು, ದೇಹದಾದ್ಯಂತ ಗಾಯಗಳಾಗಿವೆ ಎಂದು ಡಿಎಸ್ ಪಿ ಪ್ರಧಾನ ಕಚೇರಿ ಅನಿಲ್ ಸಿಂಗ್ ದೃಢಪಡಿಸಿದ್ದಾರೆ.
ಛೋಟಿ ಚೈಗಾಂವ್ ಎಂಬ ಗ್ರಾಮಕ್ಕೆ ಕಡಲೆ ಕಳ್ಳತನಕ್ಕೆ ನಾಲ್ವರು ಬಂದಿದ್ದರು. ಅರ್ಧದಷ್ಟು ಕಳ್ಳತನ ಮಾಡಿದಾಗ ಗ್ರಾಮಸ್ಥರು ಅವರನ್ನು ಗಮನಿಸಿದರು. ಇದಾದ ಬಳಿಕ, ಯುವಕನೊಬ್ಬ ನದಿಯ ದಡದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದಾನೆ ಎಂದು ಅಲ್ಸುಬಾ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ದುರದೃಷ್ಟವಶಾತ್, ಅವರು ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp