ಯುಪಿಯಲ್ಲಿ ಮುಂದುವರಿದ ಗುಂಪುಹತ್ಯೆ: ಮುಸ್ಲಿಮ್ ಯುವಕನನ್ನು ಥಳಿಸಿ ಹತ್ಯೆಗೈದ ಹಿಂದುತ್ವ ಗುಂಪು

Prasthutha|

ಬರೇಲಿ: ಉತ್ತರ ಪ್ರದೇಶದಲ್ಲಿ ಗುಂಪುಹತ್ಯೆ ಘಟನೆಗಳು ಮುಂದುವರಿದಿದ್ದು, ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮುಸ್ಲಿಮ್ ಯುವಕನೊಬ್ಬನನ್ನು ಹಿಂದುತ್ವ ಗುಂಪೊಂದು ದಾರುಣವಾಗಿ ಥಳಿಸಿ ಹತ್ಯೆ ಮಾಡಿದೆ.

- Advertisement -

ಶಾಮ್ಲಿ ಜಿಲ್ಲೆಯ ಸಮೀರ್ ಚೌಧರ್ ಎಂಬವರು ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಕೃತ್ಯ ನಡೆದಿದೆ.
ಮುಸ್ಲಿಮ್ ಎಂಬ ಕಾರಣಕ್ಕಾಗಿ ಸಮೀರ್ ನನ್ನು ಹತ್ಯೆ ಮಾಡಲಾಗಿದೆ. ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ಹಿಂದುತ್ವವಾದಿಗಳು ಶಾಮ್ಲಿ ಬಸ್ ನಿಲ್ದಾಣದಲ್ಲಿ ಸಮೀರ್ ಮೇಲೆ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಮೃತನ ಸೋದರ ಸಂಬಂಧಿ ಪ್ರವೇಝ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಆತನ ತಂದೆ ಕ್ಯಾನ್ಸರ್ ನಿಂದ ಮೃತಪಟ್ಟ ನಂತರ ಆ ಕುಟುಂಬಕ್ಕೆ ಸಮೀರ್ ಏಕೈಕ ಆಸರೆಯಾಗಿದ್ದ. ಮೃತ ಸಮೀರ್ ಇಬ್ಬರು ಸಹೋದರರು, ಸಹೋದರಿ ಮತ್ತು ತಾಯಿಯನ್ನು ಅಗಲಿದ್ದಾರೆ.

- Advertisement -


ಹಿಂದುತ್ವವಾದಿಗಳು ಚೌಧರಿ ಜೊತೆಗಿದ್ದ ಇನ್ನಿಬ್ಬರು ಹುಡುಗರ ಮೇಲೆ ದಾಳಿ ಮಾಡಿದ್ದರು. ಆದರೆ ಅವರು ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಆದರ್ಶ್ ಮಂಡಿ ಠಾಣೆಯ ಪೊಲೀಸರು 8 ಮಂದಿ ಆರೋಪಿಗಳ ವಿರುದ್ಧ ಐಪಿಸಿ 302,147,148 ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿ, ಒಬ್ಬನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp