ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ ಯತ್ನಾಳ್‌: ಕಾಂಗ್ರೆಸ್‌ ಟಾಂಗ್‌

Prasthutha|

- Advertisement -

ಬೆಂಗಳೂರು: ರಾಜಕೀಯ ಪಕ್ಷ ಬದಲಾದಂತೆ ಹಿಂದೂ ಹುಲಿಯ ವೇಷವೂ ಬದಲಾಗುತ್ತದೆ! ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಟ್ವೀಟ್‌ ಮಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್, ” ಮುಸ್ಲಿಮರೊಂದಿಗೆ ವ್ಯಾಪಾರ, ವ್ಯವಹಾರ. ಮುಸ್ಲಿಮರೊಂದಿಗೆ ಬದುಕು. ಹೊರಗೆ ಮಾತ್ರ ಮುಸ್ಲಿಮರ ಮೇಲೆ ದ್ವೇಷ ಭಾಷಣ. ಯತ್ನಾಳ್‌ ಅವರೇ, ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ! ನೀವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿಕೊಂಡು, ಜನತೆಗೆ ದ್ವೇಷ ತುಂಬುವ ನಿಮ್ಮ ಬೂಟಾಟಿಕೆಯನ್ನು ಇನ್ನಾದರೂ ಬಿಡಿ” ಎಂದಿದೆ.
ಅಭಿವೃದ್ಧಿಪರ, ಜನಪರ ಚರ್ಚೆ ಮಾಡಲು ಇಷ್ಟವಿಲ್ಲದ ಬಿಜೆಪಿ ರಾಜ್ಯದ ದಿಕ್ಕು ತಪ್ಪಿಸಲು ಇಲ್ಲದ ವಿಷಯಗಳನ್ನು ಸೃಷ್ಟಿಸುತ್ತದೆ. ಇದು ಬಿಜೆಪಿಯ ಹುಟ್ಟುಗುಣ. ಐಸಿಸ್ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂದು ಬೊಬ್ಬೆ ಹೊಡೆಯುವ ಮೌಲ್ವಿಯವರೊಂದಿಗೆ ಮೋದಿಗೇನು ಕೆಲಸ? ಐಸಿಸ್ ಸಂಪರ್ಕ ಹೊಂದಿದ್ದೇ ಆಗಿದ್ದರೆ ಪ್ರಧಾನಿಯನ್ನು ಅವರ ಬಳಿ ಬಿಟ್ಟಿದ್ದೇಕೆ? ಇಂಟಲಿಜೆನ್ಸ್ ವಿಫಲವಾಗಿದೆಯೇ? ಈ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕು, ಇಲ್ಲವೇ ಸುಳ್ಳು ಆರೋಪ ಮಾಡಿದ್ದಕ್ಕೆ ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ” ಎಂದು ಕಾಂಗ್ರೆಸ್‌ ಟ್ವೀಟ್‌ನಲ್ಲಿ ಆಗ್ರಹಿಸಿದೆ.

Join Whatsapp