ಮಧ್ಯಪ್ರದೇಶದಲ್ಲಿ ಮುಸ್ಲಿಮ್ ಮಹಿಳೆಗೆ ಚಿಕಿತ್ಸೆ ನಿರಾಕರಿಸಿ ಹಲ್ಲೆ ನಡೆಸಿದ ವೈದ್ಯರು

Prasthutha|

ಭೋಪಾಲ್: ಮುಸ್ಲಿಮ್ ಎಂಬ ನೆಲೆಯಲ್ಲಿ ತನಗೆ ಚಿಕಿತ್ಸೆ ನಿರಾಕರಿಸಿ ವೈದ್ಯರು ಹಲ್ಲೆ ನಡೆಸಿದ್ದಾರೆ ಎಂದು ಮಹಿಳಾ ರೋಗಿಯೊಬ್ಬರು ಆರೋಪಿಸಿದ್ದಾರೆ. ಮಾತ್ರವಲ್ಲ ಧರ್ಮವನ್ನು ನಿಂದಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಅವರು ದೂರಿದ್ದಾರೆ.
ಮಧ್ಯಪ್ರದೇಶದ ರೆಹಾನಾ ಪರ್ವೀನ್ ಎಂಬ ಮಹಿಳೆಯೇ ಸಂತ್ರಸ್ತೆಯಾಗಿದ್ದು, ತಾನು ಮುಸ್ಲಿಮ್ ಎಂಬ ಕಾರಣಕ್ಕಾಗಿ ಡಾ. ಪ್ರದೀಪ್ ಧಾಖಡ್ ಅವರು ಚಿಕಿತ್ಸೆ ನಿರಾಕರಿಸಿದ ವೈದ್ಯರಾಗಿದ್ದು, ಅವರು ತನ್ನ ಹೊಟ್ಟೆಗೆ ಒದ್ದು, ಆಸ್ಪತ್ರೆಯಿಂದ ಹೊರಹಾಕಲಾಗಿದೆ ಎಂದು ಆಕೆ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

- Advertisement -

ಘಟನೆಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ತೆಯ ಪತಿ ಕಲೀಮ್ ಶಾ, ವೈದ್ಯರು ನಮ್ಮನ್ನು ಕೊಲ್ಲುವ ಬೆದರಿಕೆ ಹಾಕಿ ಹೊರದಬ್ಬಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದ ತನ್ನ ಪತ್ನಿಗೆ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿ ಆಕೆಗೆ ಹಲ್ಲೆ ನಡೆಸಿದ ಸಂದರ್ಭದಲ್ಲಿ ಮೂರ್ಛೆ ಹೋಗಿದ್ದಳು ಎಂದು ಅವರು ತಿಳಿಸಿದರು.

ಈ ಸಂಬಂಧ ಭೀಮ್ ಸೇನಾ ರಾಜ್ಯ ಸಂಯೋಜಕರಾದ ಪಂಕಜ್ ಅಕುಲ್ಕರ್ ಅವರು ಮಧ್ಯಪ್ರವೇಶಿಸಿ ಸಂತ್ರಸ್ತೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಪ್ರಸಕ್ತ ಆಕೆಗೆ ಈಗ ಹಿರಿಯ ವೈದ್ಯರಿಂದ ಚಿಕಿತ್ಸೆ ನೀಡುತ್ತಿದ್ದಾರೆ.

- Advertisement -

ಸಂತ್ರಸ್ತೆ ಮುಸ್ಲಿಮ್ ಮಹಿಳೆಗೆ ಚಿಕಿತ್ಸೆ ನಿರಾಕರಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರಕರಣ ತನ್ನ ಗಮನಕ್ಕೆ ಬಂದಿದ್ದು, ಇದರ ತನಿಖೆಗಾಗಿ ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕರಾದ ಎ.ಕೆ. ತಿವಾರಿ ತಿಳಿಸಿದ್ದಾರೆ.

ಸಂತ್ರಸ್ತೆಯ ಪತಿ ಕಲೀಂ ಶಾ ಬೆತುಲ್ ಠಾಣೆಯಲ್ಲಿ ದೂರು ದಾಖಲಿಸಿದನ್ವಯ ವೈದ್ಯರ ವಿರುದ್ಧ ಐಪಿಸಿ ಸೆಕ್ಷನ್ 294, 323 ಮತ್ತು 506 ರ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಮಾತ್ರವಲ್ಲ ತನಿಖೆ ಆರಂಭಿಸಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಪೊಲೀಸ್ ಅಧಿಕಾರಿ ರತ್ನಾಕರ್ ಹಿಂಗ್ವೆ ತಿಳಿಸಿದ್ದಾರೆ



Join Whatsapp