ಪಲ್ವಾಲ್’ನಲ್ಲಿ ಮುಸ್ಲಿಂ ಲಾರಿ ಚಾಲಕನ ಮೇಲೆ ಸ್ವಯಂಘೋಷಿತ ಗೋರಕ್ಷಕರಿಂದ ಹಲ್ಲೆ

Prasthutha|

ಚಂಡೀಗಡ: ಜಾನುವಾರು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಸಂಘಪರಿವಾರಕ್ಕೆ ಸೇರಿದ ಸ್ವಯಂ ಘೋಷಿತ ಗೋರಕ್ಷಕ್ ಎಂಬ ಗೂಂಡಾಗಳ ಪಡೆಯೊಂದು ಮುಸ್ಲಿಮ್ ಲಾರಿ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಹರಿಯಾಣದ ಪಲ್ವಾಲ್ ನಗರದಲ್ಲಿ ನಡೆದಿದೆ.

- Advertisement -


ಜಾಲ ತಾಣಗಳಲ್ಲಿ ಈ ಕುರಿತ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ದುಷ್ಕರ್ಮಿಗಳು ಪ್ರಾಣಿಗಳನ್ನು ಟ್ರಕ್ ಚಾಲಕನಿಂದ ರಕ್ಷಿಸಿದಂತೆ ಅರೆಬರೆ ತೋರಿಸಲಾಗಿದೆ. ಅವರು ನಡೆಸಿದ ಕಾರ್ಯಾಚರಣೆಯ ದಿನಾಂಕವೂ ವೀಡಿಯೋದಲ್ಲಿ ಇದೆ.
ಸರಕಾರವು ಇಂತಹ ಪುಂಡರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಆಮೂಲಕ ನೆಲದ ಕಾನೂನು ಎತ್ತಿ ಹಿಡಿಯುವುದು ಅವರ ಕರ್ತವ್ಯವಾಗಿದೆ ಎಂದು ಪಲ್ವಾಲ್’ನ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದರು.


ಇಂತಹ ದಾಳಿಗಳ ಹಿಂದೆ ನಿಜವಾದ ಗೋರಕ್ಷಣೆಯ ಉದ್ದೇಶ ಇರುವುದಿಲ್ಲ. ಮುಸ್ಲಿಂ ಸಮುದಾಯದವರ ಮೇಲೆ ಇರುವ ದ್ವೇಷ ಮತ್ತು ಅಸಹನೆಗಳೇ ಇಂತಹ ದಾಳಿಗಳಿಗೆ ಕಾರಣ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ.
ಮೇಲಿನ ಘಟನೆಯಲ್ಲಿ ಲಾರಿಯಲ್ಲಿ ಪ್ರಾಣಿಗಳು ಇದ್ದರೂ ಅವು ದನ ಆಗಿರಲಿಲ್ಲ ಎಂದು ಹೇಳಲಾಗುತ್ತಿದೆ.



Join Whatsapp