ಮುಸ್ಲಿಮ್ ವಿದ್ಯಾರ್ಥಿ ಮೇಲೆ ಪೊಲೀಸರಿಂದ ಹಲ್ಲೆ: ಆರೋಪ

Prasthutha|

ತೇರೆದಾಳ್: ವೀಡಿಯೋ ಮಾಡಿದ್ದಾನೆಂದು ಆರೋಪಿಸಿ ಮುಸ್ಲಿಮ್ ಯುವಕನ ಮೇಲೆ ಪ್ರಾಂಶುಪಾಲರ ಸಮ್ಮುಖದಲ್ಲೇ ಪೊಲೀಸರು ಹಲ್ಲೆ ಮಾಡಿರುವ ಘಟನೆ ತೇರೆದಾಳ್ ನಲ್ಲಿ ನಡೆದಿದೆ.

- Advertisement -


ನವೀದ್ ಹಸನ್ (19) ಹಲ್ಲೆಗೊಳಗಾದ ವಿದ್ಯಾರ್ಥಿ. ಈತ ಫೆ.18 ರಂದು ತರಗತಿಯಲ್ಲಿ ಟೋಪಿ ಧರಿಸಿ ಕುಳಿತುಕೊಂಡಿದ್ದ. ಆದರೆ ಪ್ರಾಂಶುಪಾಲರು ಟೋಪಿ ಧರಿಸಿದ ಕಾರಣಕ್ಕೆ ತರಗತಿಯಿಂದ ಹೊರಹಾಕಿದ್ದಾರೆ.


ಬಳಿಕ ಮರುದಿನ ಆತನನ್ನು ಕಾಲೇಜಿಗೆ ಬರಲು ಹೇಳಿದ್ದಾರೆ. ಈ ವೇಳೆ ಪೊಲೀಸರು ಕೂಡ ಅಲ್ಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ನವೀದ್, ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದಾನೆ ಎಂಬ ಕಾರಣಕ್ಕೆ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ್ದಾರೆಂದು ಯುವಕ ಹೇಳಿದ್ದಾನೆ.

Join Whatsapp