ಖಾರ್ಗೋನ್ ಹಿಂಸಾಚಾರ: ಹತ್ತು ದಿನಗಳ ಬಳಿಕ ಮುಸ್ಲಿಮ್ ಯುವಕನ ಮೃತದೇಹ ಪತ್ತೆ !

Prasthutha|

ಖಾರ್ಗೋನ್: ಮಧ್ಯಪ್ರದೇಶದ ಖಾರ್ಗೋನ್ ನಲ್ಲಿ ರಾಮನವಮಿ ಮೆರವಣಿಗೆಯ ವೇಳೆ ಉಂಟಾಗಿದ್ದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತ್ತು. ಘರ್ಷಣೆಯ ವೇಳೆ ಕಾಣೆಯಾಗಿದ್ದ ಇಬ್ರಿಸ್ ಖಾನ್ ಅಲಿಯಾಸ್ ಸದ್ದಾಂ ಅವರ ಮೃತದೇಹ 10 ದಿನಗಳ ಬಳಿಕ ಪತ್ತೆಯಾಗಿದೆ.

- Advertisement -

ಎಂಟು ತಿಂಗಳ ಮಗು ಹೊಂದಿದ್ದ ಇಬ್ರಿಸ್ ಖಾನ್ ಹಿಂಸಾಚಾರದ ಬಳಿಕ ಶವವಾಗಿ ಪತ್ತೆಯಾಗಿದ್ದು, ಭಾರೀ ಭದ್ರತೆಯೊಂದಿಗೆ ಪೊಲೀಸರು ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸಿದ್ದಾರೆ. ಶವ ಸಂಸ್ಕಾರ ಖಾರ್ಗೋನ್ ನಲ್ಲಿ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಏಪ್ರಿಲ್ 10 ರಂದು ಆನಂದ್ ನಗರದ ಮಸೀದಿಯಲ್ಲಿ ರಮಝಾನ್ ಉಪವಾಸ ತೊರೆಯಲು ಹೋದ ಇಬ್ರಿಸ್ ಅಲಿಯಾಸ್ ಮೇಲೆ ಸಂಘಪರಿವಾರದ ಕಾರ್ಯಕರ್ತರು ತಲ್ವಾರ್ ನಿಂದ ಹಲ್ಲೆ ನಡೆಸಿ ಕೊತ್ವಾಲಿಗೆ ಕರೆದೊಯ್ದಿದ್ದಾರೆ ಎಂದು ಇಬ್ರಿಸ್ ಸಂಬಂಧಿಕರು ಆರೋಪಿಸಿದ್ದಾರೆ. ಇಬ್ರಿಸ್ ಮೃತದೇಹವನ್ನು ಪೊಲೀಸರು ಎಂಟು ದಿನಗಳ ಕಾಲ ಬಚ್ಚಿಟ್ಟು ಕಳೆದ ರಾತ್ರಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -


ಕರ್ಫ್ಯೂ ಹೇರಿದ ಪ್ರದೇಶ ಇಸ್ಲಾಂ ಪುರಕ್ಕೆ ಇಬ್ರಿಸ್ ಮೃತದೇಹವನ್ನು ಕರೆತರಲಾಗಿದೆ, ಪರಿಣಾಮ ಕರ್ಫ್ಯೂಗೆ ನಾಲ್ಕು ಘಂಟೆಗಳ ವಿನಾಯಿತಿಯನ್ನು ಇಸ್ಲಾಂ ಪುರ ಆಡಳಿತ ಮಂಡಳಿ ನೀಡಿದೆ. ಪ್ರದೇಶಕ್ಕೆ ಸಚಿವ ಕಮಲ್ ಪಟೇಲ್ ರ ಭೇಟಿಯನ್ನೂ ರದ್ದುಗೊಳಿಸಲಾಗಿದೆ.



Join Whatsapp