ಗುಂಪುಹಿಂಸೆಗೆ ಬಿಹಾರದಲ್ಲಿ ಮುಸ್ಲಿಮ್ ವ್ಯಕ್ತಿ ಬಲಿ | 5 ದುಷ್ಕರ್ಮಿಗಳ ಬಂಧನ!

Prasthutha|

ಕಟಿಹಾರ್: ದುಷ್ಕರ್ಮಿಗಳ ಗುಂಪೊಂದು ಮುಸ್ಲಿಮ್ ವ್ಯಕ್ತಿಯನ್ನು ಹೊಡೆದು ಕೊಂದ ಘಟನೆ ಬಿಹಾರದ ಮಾಧೇಪುರದಲ್ಲಿ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ಕು ಮಂದಿ ಮಹಿಳೆಯರು ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತ ವ್ಯಕ್ತಿಯನ್ನು ಮುಹಮ್ಮದ್ ಅಕ್ಬರ್ ಎಂದು ಗುರುತಿಸಲಾಗಿದೆ. ಪ್ರಾರ್ಥನೆಗೆ ತೆರಳುತ್ತಿದ್ದಾಗ ನೆರೆಹೊರೆಯವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ನಡೆಸಿದ್ದಾರೆ ಎಂದು ಮೃತರ ಮಗ ಸುಬರ್ ಆಲಮ್ ಆರೋಪಿಸಿದ್ದಾರೆ.

- Advertisement -

ಸುಬರ್ ಆಲಮ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ರಾಜ ಭಗತ್, ಅಜಯ್ ಕುಮಾರ್ ಭಗತ್, ಮಾನ್ಸಿ ದೇವಿ, ಭೋಲಾ ಭಗತ್, ಮನೋಜ್ ಕುಮಾರ್ ಪಾಸ್ವಾನ್ ಮತ್ತು ಇನ್ನಿತರ ಮಹಿಳೆಯರ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲ ನಾಲ್ಕು ಮಹಿಳೆಯರು ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

- Advertisement -