ರಾಜಸ್ಥಾನದ ಅಲ್ವಾರ್ ನಲ್ಲಿ ಮುಸ್ಲಿಂ ವ್ಯಕ್ತಿಯ ಥಳಿಸಿ ಹತ್ಯೆ

Prasthutha|

ಅಲ್ವಾರ : ರಾಜಸ್ಥಾನದ ಅಲ್ವಾರ ಜಿಲ್ಲೆಯಲ್ಲಿ ಜ.30-31ರ ರಾತ್ರಿ 50ರ ಹರೆಯದ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಲಾಗಿದೆ.

- Advertisement -

ಮೃತ ವ್ಯಕ್ತಿ ಅಲ್ವಾರ್ ಜಿಲ್ಲೆಯ ಖೈರ್ಥಲ್ ನಿವಾಸಿ ದೀನ್ ಮುಹಮ್ಮದ್ ಎಂದು ಗುರುತಿಸಲಾಗಿದೆ.

ಆ ದಿನ ರಾತ್ರಿ ಗ್ರಾಮದಲ್ಲಿ ಯಾರೋ ದನ ಕಳ್ಳತನಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಬಂದಿತ್ತು. ಬೆಳಗ್ಗೆ ಗುಡಿಸಲೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮೊಹಮ್ಮದ್ ಆ ಗುಡಿಸಲಿನಲ್ಲಿ ಕುಳಿತು ಹೊಲಕ್ಕೆ ಬರುವ ವನ್ಯಜೀವಿಗಳಿಂದ ಬೆಳೆ ರಕ್ಷಿಸುತ್ತಿದ್ದರು ಎಂದು ಹರ್ಸೋರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸತ್ಯ ನಾರಾಯಣ್ ಹೇಳಿದ್ದಾರೆ.

- Advertisement -

ಮುಹಮ್ಮದ್ ರ ಸಂಬಂಧಿಕರು ನೀಡಿರುವ ದೂರಿನ ಪ್ರಕಾರ, ಅವರನ್ನು ಕೋಲು ಮತ್ತು ಇತರ ಶಸ್ತ್ರಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಲಾಗಿದೆ. ನಾಲ್ವರು ವ್ಯಕ್ತಿಗಳನ್ನು ಎಫ್ ಐಆರ್ ನಲ್ಲಿ ಹೆಸರಿಸಲಾಗಿದೆ.

ಮುಹಮ್ಮದ್ ಆರೋಪಿಗಳಲ್ಲಿ ಓರ್ವನ ಮನೆಗೆ ಮೊಬೈಲ್ ಚಾರ್ಜ್ ಇಡುವುದಕ್ಕೆ ಕೋರಿ ತೆರಳಿದ್ದರು. ಅದಾದ ಬಳಿಕ 10 ನಿಮಿಷಗಳಲ್ಲಿ ಅವರ ಹತ್ಯೆ ನಡೆದಿದೆ. ಹತ್ಯೆಗೆ ಕಾರಣವೇನೆಂದು ನಮಗೆ ಗೊತ್ತಿಲ್ಲ ಎಂದು ಮುಹಮ್ಮದ್ ರ ಕುಟುಂಬ ತಿಳಿಸಿದೆ.

ಸಜ್ಜನ್ ಸಿಂಗ್ ಯಾದವ್, ಜಗದೀಶ್, ಕುಶಿರಾಮ್ ಧೋಬಿ, ರಾಜೇಂದ್ರ ಸಿಂಗ್ ರಜಪೂತ್, ಬನಾರಸಿ ಪ್ರಜಾಪತ್ ಮುಂತಾದವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ದನದ ವಿಷಯಕ್ಕೆ ನಡೆದ ಹತ್ಯೆಯಂತೆ ಇದು ಕಂಡುಬರುತ್ತಿಲ್ಲ ಎಂದು ಭಿವಾಡಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಮೂರ್ತಿ ಜೋಷಿ ಹೇಳಿದ್ದಾರೆ.



Join Whatsapp