ಮಥುರಾ | ‘ಭಾರತ್ ಮಾತಾಕಿ ಜೈ’ ಕೂಗುವಂತೆ ಬಲವಂತಪಡಿಸಿ ಮುಸ್ಲಿಮ್ ವ್ಯಕ್ತಿಗೆ ಸಂಘಪರಿವಾರದಿಂದ ಹಲ್ಲೆ; ವೀಡಿಯೋ ವೈರಲ್

Prasthutha|

ಮಥುರಾ: ಮುಸ್ಲಿಮ್ ವ್ಯಕ್ತಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ ಸಂಘಪರಿವಾರ ಕಾರ್ಯಕರ್ಯರು ‘ಭಾರತ್ ಮಾತಾಕಿ ಜೈ’ ಕೂಗುವಂತೆ ಬಲವಂತಪಡಿಸಿ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಮಥುರಾದಿಂದ ವರದಿಯಾಗಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಸ್ಲಿಮ್ ವ್ಯಕ್ತಿಯೊಬ್ಬರನ್ನು ಸುತ್ತುವರಿದ ಸಂಘಪರಿವಾರದ ಗುಂಪೊಂದು ‘ಭಾರತ್ ಮಾತಾಕಿ ಜೈ’ ಘೋಷಣೆ ಕೂಗುವಂತೆ ಬಲವಂತಪಡಿಸಿರುವುದು ಸೆರೆಯಾಗಿದೆ. ‘ಭಾರತ್ ಮಾತಾಕಿ ಜೈ’ ಕೂಗಿದ ಬಳಿಕ ನನ್ನ ಮೇಲೆ ಯಾಕೆ ಹಲ್ಲೆ ನಡೆಸುತ್ತೀರಿ ಎಂದು ಸಂತ್ರಸ್ತ ಮುಸ್ಲಿಮ್ ವ್ಯಕ್ತಿ ಪ್ರಶ್ನಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

Join Whatsapp