ಮುಸ್ಲಿಂ ಲೀಗ್ ಜಾತ್ಯತೀತ ಪಕ್ಷ: ರಾಹುಲ್ ಗಾಂಧಿ

Prasthutha|

ವಾಷಿಂಗ್ಟನ್: ‘ಇಂಡಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಒಂದು ಪರಿಪೂರ್ಣವಾದ ಜಾತ್ಯಾತೀತ ಪಕ್ಷ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -


ವಾಷಿಂಗ್ಟನ್ ನ ನ್ಯಾಷನಲ್ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಮುಸ್ಲಿಂ ಲೀಗ್ ನೊಂದಿಗೆ ಕಾಂಗ್ರೆಸ್ ಪಕ್ಷದ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ’ಮುಸ್ಲಿಂ ಲಿಗ್ ಪಕ್ಷದ ಬಗ್ಗೆ ಜಾತ್ಯತೀತ ಅಲ್ಲ ಎನ್ನುವಂತದ್ದು ಏನೂ ಇಲ್ಲ‘ ಎಂದು ಹೇಳಿದರು.


ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಉತ್ತಮ ಸಾಧನೆ ಮಾಡುತ್ತದೆ ಎಂದು ನಂಬಿದ್ದೇನೆ. ನೋಡುತ್ತಿರಿ, ಆಶ್ಚರ್ಯಕರ ರೀತಿಯಲ್ಲಿ ಪಕ್ಷ ಹೊರಹೊಮ್ಮಲಿದೆ. ನೋಡುತ್ತಿರಿ, ವಿರೋಧ ಪಕ್ಷಗಳ ಒಗ್ಗಟ್ಟು ಬಿಜೆಪಿಯನ್ನು ಸೋಲಿಸಲಿದೆ’ ಎಂದು ಅವರು ಹೇಳಿದರು.