ಮುಸ್ಲಿಮ್ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಪ್ರಕರಣ: ಕಠಿಣ ಕಾನೂನು ಪ್ರಕ್ರಿಯೆಗೆ ಒಳಪಡಿಸುವಂತೆ ಮುಸ್ಲಿಂ ಜಸ್ಟೀಸ್ ಫೋರಂ ಒತ್ತಾಯ

Prasthutha|

ಮಂಗಳೂರು: ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಅಮಾಯಕ ಇಸಾಕ್ ಎಂಬವರ ಮೇಲೆ ನಡೆದ ಹತ್ಯಾಪ್ರಯತ್ನದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಮತ್ತು ಅದರ ಹಿಂದಿರುವ ರೂವಾರಿಗಳನ್ನು ಕಠಿಣ ಕಾನೂನು ಪ್ರಕ್ರಿಯೆಗೆ ಒಳಪಡಿಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಮುಸ್ಲಿಂ ಜಸ್ಟೀಸ್ ಫೋರಂ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.

- Advertisement -


ನಿಯೋಗದಲ್ಲಿ ಮುಸ್ಲಿಂ ಜಸ್ಟೀಸ್ ಫಾರಂ ಇದರ ಸ್ಥಾಪಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಅಧ್ಯಕ್ಷ ಯು.ಟಿ. ಇರ್ಷಾದ್, ಉಪಾಧ್ಯಕ್ಷ ಅಲಿ ಹಾಸನ್, ಪ್ರಧಾನ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ, ಕಾರ್ಯದರ್ಶಿ ಸಲಾಂ ಉಚ್ಚಿಲ್, ವಕ್ತಾರ ಹನೀಫ್ ಖಾನ್ ಕೊಡಾಜೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಇಮ್ರಾನ್, ಎ.ಆರ್. ನವಾಝ್ ಉಳ್ಳಾಲ, ಇದ್ದಿಕುಂಞಿ ಉಪಸ್ಥಿತರಿದ್ದರು.



Join Whatsapp