ಮುಸ್ಲಿಮ್ ಯುವತಿಯರು 16 ವರ್ಷದಲ್ಲಿ ಮದುವೆ ಆಗಬಹುದು: ಪಂಜಾಬ್, ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು

Prasthutha|

ಹರ್ಯಾಣ: ಮುಸ್ಲಿಮ್ ಯುವತಿಯರು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ನಿಯಮಾನುಸಾರ ತಮ್ಮ 16 ವರ್ಷದಲ್ಲಿ ಮದುವೆ ಆಗಬಹುದು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡುವ ಮೂಲಕ ಅಪ್ರಾಪ್ತೆಯರ ಮದುವೆಯನ್ನು ಎತ್ತಿ ಹಿಡಿದಿದೆ.

- Advertisement -

ಈ ಆದೇಶದನ್ವಯ ತಮ್ಮ ಇಚ್ಛಾನುಸಾರ 16 ವರ್ಷ ದಾಟಿದ ಬಳಿಕ ಮದುವೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ಪಡೆದಿದ್ದಾರೆ ಎಂದು ಪಂಜಾಬ್-ಹರ್ಯಾಣ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.

ಪಠಾಣ್ ಕೋರ್ಟ್ ಕುಟುಂಬವೊಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಸ್ ಜಿತ್ ಸಿಂಗ್ ಬೇಡಿ ಈ ಆದೇಶ ಹೊರಡಿಸಿದ್ದು, ಕುಟುಂಬವು ಹೊರಗಿನ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದೆ ಎಂದು ತೀರ್ಪು ನೀಡಿದ್ದಾರೆ.



Join Whatsapp