ಉ.ಪ್ರ ಚುನಾವಣಾ ಧ್ರುವೀಕರಣದ ಭಾಗವಾಗಿ ಮುಸ್ಲಿಮ್ ಯುವಕರ ಬಂಧನ : ಪಿಯುಸಿಎಲ್

Prasthutha|

ನವದೆಹಲಿ: ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಮತದಾರರನ್ನು ಕೋಮು ಆಧಾರದಲ್ಲಿ ಧ್ರುವೀಕರಿಸುವ ಸಲುವಾಗಿ ಬಿಜೆಪಿ ನೇತೃತ್ವದ ಉ.ಪ್ರ ಸರ್ಕಾರ ಮುಸ್ಲಿಮ್ ಯುವಕರನ್ನು ಭಯೋತ್ಪಾದನೆಯ ಸುಳ್ಳಾರೋಪದಲ್ಲಿ ಸಿಲುಕಿಸುತ್ತಿದೆ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಅಲಹಾಬಾದ್ ಘಟಕ ಆರೋಪಿಸಿದೆ.

- Advertisement -

ಅಲಹಾಬಾದ್ ನಲ್ಲಿ ನಾಲ್ವರು ಮುಸ್ಲಿಮ್ ಯುವಕರನ್ನು ಭಯೋತ್ಪಾದನೆ ಆರೋಪದಲ್ಲಿ ಬಂಧಿಸಿದ ಹಿನ್ನೆಲೆಯಲ್ಲಿ ಪಿಯುಸಿಎಲ್ ಈ ಮೇಲಿನ ಹೇಳಿಕೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ.
ಮಾತ್ರವಲ್ಲ ಉ.ಪ್ರ ಎಟಿಎಸ್ ನಿಂದ ಅಮಾಯಕರ ಬಂಧನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಪಿಯುಪಿಎಲ್ ಎಚ್ಚರಿಸಿದೆ.

ಬಂಧನದ ಕುರಿತು ವರದಿಯನ್ನು ಬಿಡುಗಡೆ ಮಾಡಿದ ಪಿಯುಸಿಎಲ್ ಅಲಹಾಬಾದ್ ಕಾರ್ಯದರ್ಶಿ ಮನೀಶ್ ಸಿನ್ಹಾ ಪ್ರತಿಕ್ರಿಯಿಸಿ, ಆದಿತ್ಯನಾಥ್ ಸರ್ಕಾರ ಚುನಾವಣಾ ಹಿನ್ನೆಲೆಯಲ್ಲಿ ಹಿಂದೂ ಮತಗಳನ್ನು ಧ್ರುವೀಕರಿಸಲು ಈ ರೀತಿಯ ಕೃತ್ಯಕ್ಕೆಮುಂದಾಗಿದೆ ಎಂದು ತಿಳಿಸಿದ್ದಾರೆ.

- Advertisement -

ಪಿಯುಸಿಎಲ್ ಸತ್ಯಶೋಧನಾ ತಂಡವನ್ನು ರಚಿಸಿದ್ದು, ಕೆ.ಕೆ ರಾಯ್, ನ್ಯಾಯವಾದಿ ಸೀಮಾ ಆಝಾದ್, ವಕೀಲ ಚಾರ್ಲಿ ಪ್ರಕಾಶ್, ವಕೀಲ ಸೋನಿ ಆಝಾದ್, ಜಾವೇದ್ ಮುಹಮ್ಮದ್, ಉಮರ್ ಖಾಲೀದ್, ಕಲೀಮ್, ರಹೀಮ್ ಮತ್ತು ಪಿಯುಸಿಎಲ್ ಕಾರ್ಯದರ್ಶಿ ಮನೀಶ್ ಸಿನ್ಹಾ ಒಳಗೊಂಡಿರುತ್ತಾರೆ.

Join Whatsapp