ರಾಜ್ಯ ಮಟ್ಟದ ಪೆಂಕಾಕ್ ಸಿಲತ್ ಕ್ರೀಡಾ ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಎಂ.ಟೈಗರ್ಸ್ ನ ಮುಸಾಬ್

Prasthutha|

ಬೆಂಗಳೂರು: ರಾಜ್ಯ ಮಟ್ಟದ ಪೆಂಕಾಕ್ ಸಿಲತ್ ಕ್ರೀಡಾ ಕೂಟದಲ್ಲಿ ಎಂ.ಟೈಗರ್ಸ್ ನ ಮುಸಾಬ್ ಬೆಳ್ಳಿ ಪದಕ ಗೆದ್ದಿದ್ದಾರೆ.

- Advertisement -

ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಹಾಗೂ ಭಾರತೀಯ ಪೆಂಕಾಕ್ ಸಿಲತ್ ಫೆಡರೇಷನ್ ಇದರ ಜಂಟಿ ಆಶ್ರಯದಲ್ಲಿ 9ನೇ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ನೆಲಮಂಗಲದ ವಿಶ್ವಶಾಂತಿ ಆಶ್ರಮ ಅರಶಿನಕುಂಬೆಯಲ್ಲಿ ಏರ್ಪಡಿಸಲಾಗಿತ್ತು.

ಕ್ರೀಡಾಕೂಟದಲ್ಲಿ ಎಂ.ಟೈಗರ್ಸ್ ಮಂಗಳೂರಿನ ವಿದ್ಯಾರ್ಥಿ ಮುಸಾಬ್ ಇಬ್ರಾಹಿಂ ಮುಹಮ್ಮದ್ 26-28 ತೂಕ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದರು. ಅವರು ಆಸಿಫ್ ಕಿನ್ಯ ಮತ್ತು ಸಲ್ಮಾನ್ ತರಬೇತಿಯಲ್ಲಿ ತಯಾರಿಯಾದ ಪ್ರತಿಭೆ.

Join Whatsapp