ಮುರುಘಾಶ್ರೀ ಬಿಡುಗಡೆ ತಪ್ಪೆಂದ ನ್ಯಾಯಾಲಯ: ತನಿಖೆಗೆ ಆದೇಶ

Prasthutha|

ಚಿತ್ರದುರ್ಗ: ಪೋಕ್ಸೋ ಪ್ರಕರಣಗಳ ಅಡಿಯಲ್ಲಿ ಜೈಲು ಪಾಲಾಗಿ, ಒಂದು ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಿಡುಗಡೆಗೊಳಿಸಿದ ಪ್ರಕ್ರಿಯೆಯನ್ನು ತನಿಖೆ ನಡೆಸಲು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.

- Advertisement -

ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣದ ಬಾಡಿ ವಾರೆಂಟ್ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶೆ ಬಿ.ಕೆ.ಕೋಮಲಾ, ಕಾರಾಗೃಹದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಈ ಆದೇಶ ನೀಡಿದ್ದಾರೆ.

2ನೇ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಹಾಗಿರುವಾಗ ಆರೋಪಿಯನ್ನು ಕಾರಾಗೃಹದಿಂದ ಬಿಡುಗಡೆ ಮಾಡಿರುವ ಪ್ರಕ್ರಿಯೆ ಬಗ್ಗೆ ತನಿಖೆ ನಡೆಸಿ ಎಂದು ಕಾರಾಗೃಹದ ಎಡಿಜಿಪಿಗೆ ಪತ್ರದ ಮೂಲಕ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ವಿಶೇಷ ಸರ್ಕಾರಿ ವಕೀಲ ಎಚ್‌.ಆರ್. ಜಗದೀಶ್ ತಿಳಿಸಿದ್ದಾರೆ.




Join Whatsapp