ಮೈಸೂರು: ತನಿಖಾಧಿಕಾರಿಗಳ ತಪ್ಪಿನಿಂದ ಮುರುಘಾ ಶ್ರೀಗೆ ಜಾಮೀನು ಸಿಕ್ಕಿದೆ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಪರಶು ಅವರು ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆ ಆಗಿದ್ದರೆ ಇಷ್ಟು ಬೇಗ ಜಾಮೀನು ಸಿಗುತ್ತಿರಲಿಲ್ಲ. ಇವತ್ತು ಸ್ವಾಮೀಜಿ ಪರ ಅವರ ಭಕ್ತರು ಜಯ ಘೋಷ ಮೊಳಗಿಸಿರುವುದು ಸಂತ್ರಸ್ತ ಮಕ್ಕಳಲ್ಲಿ ಭಯ ಹುಟ್ಟಿಸುವಂತಿದೆ ಎಂದು ತಿಳಿಸಿದ್ದಾರೆ.