ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸದಂತೆ ಮುಖ್ಯ ಆರೋಪಿ ಮುರುಘ ಶರಣರನ್ನು ಬಂಧಿಸಿದ್ದ ಚಿತ್ರದುರ್ಗ ಪೊಲೀಸರು ಪ್ರಕರಣದ ಎರಡನೇ ಆರೋಪಿ ರಶ್ಮಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಎರಡನೇ ಆರೋಪಿ ರಶ್ಮಿಯವರನ್ನು ಬಂಧಿಸಿರುವುದಾಗಿ ಚಿತ್ರದುರ್ಗ ಎಸ್ಪಿ ತಿಳಿಸಿದ್ದಾರೆ. ಮುರುಘಾ ಮಠದಲ್ಲಿ ಲೇಡಿ ವಾರ್ಡನ್ ಆಗಿರುವ ರಶ್ಮಿಯನ್ನು ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಹಣ್ಣನ್ನು ಕೊಡಲು ಕಳಿಸುವ ನೆಪದಲ್ಲಿ ಸ್ವಾಮೀಜಿಯ ರೂಮಿಗೆ ಮಹಿಳಾ ವಾರ್ಡನ್ ರಶ್ಮಿ ತಮ್ಮನ್ನು ಕಳುಹಿಸುತಿದ್ದರು ಎಂದು ಸಂತ್ರಸ್ತ ಬಾಲಕಿಯರು ವಿಚಾರಣೆಯಲ್ಲಿ ಆರೋಪಸಿದ್ದರು.