ಉಡುಪಿ ಮಹಿಳೆಯ ಕೊಲೆ: ವಿದೇಶಕ್ಕೆ ಹಾರಿದ್ದ ಆರೋಪಿ 3 ವರ್ಷಗಳ ಬಳಿಕ ಏರ್ ಪೋರ್ಟ್‌ನಲ್ಲಿ ಅರೆಸ್ಟ್

Prasthutha|

ಉಡುಪಿ: 2021ರಲ್ಲಿ ಉಡುಪಿಯ ಬ್ರಹ್ಮಾರದ ಕುಮ್ರಗೋಡುವಿನ ಮನೆಯಲ್ಲಿ ಮಹಿಳೆಯ ಹತ್ಯೆ ಪ್ರಕರಣದ ಆರೋಪಿಯೋರ್ವ ವಿದೇಶಕ್ಕೆ ಎಸ್ಕೇಪ್ ಆಗಿದ್ದು, ಮೂರು ವರ್ಷಗಳ ಬಳಿಕ ಲಖನೌ ಏರ್ ಪೋರ್ಟ್ ನಲ್ಲಿ ಅರೆಸ್ಟ್ ಆಗಿದ್ದಾನೆ. ಧರ್ಮೇಂದ್ರ ಕುಮಾರ್ ಸುಹಾನಿ ಬಂಧಿತ.

- Advertisement -

2021ರ ಜುಲೈನಲ್ಲಿ ಬ್ರಹ್ಮಾವರ ತಾಲೂಕಿನ ಕುಮ್ರಗೋಡುವಿನ ಫ್ಲಾಟ್ ನಲ್ಲಿ ವಿಶಾಲ ಗಾಣಿಗ ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿಗಳಾದ ಮಹಿಳೆಯ ಪತಿ ರಾಮಕೃಷ್ಣ, ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್ ನನ್ನು ಬಂಧಿಸಲಾಗಿತ್ತು. ಆದರೆ ಕೊಲೆಗೆ ಸಹಕರಿಸಿದ್ದ ಧರ್ಮೇಂದ್ರ ಕುಮಾರ್ ಸುಹಾನಿ ವಿದೇಶಕ್ಕೆ ಹಾರಿ ಎಸ್ಕೇಪ್ ಆಗಿದ್ದನು.

ಇದೀಗ ಮೂರು ವರ್ಷದ ಬಳಿಕ ಲಖನೌ ವಿಮಾನ ನಿಲ್ದಾಣದಲ್ಲಿ ಧರ್ಮೇಂದ್ರ ಕುಮಾರ್ ಸುಹಾನಿ ಪತ್ತೆಯಾಗಿದ್ದಾನೆ.

- Advertisement -

ಬ್ರಹ್ಮಾವರ ಎಎಸ್‌ಐ ಶಾಂತರಾಜ ಹಾಗೂ ಕಾನ್ಸ್ ಟೇಬಲ್ ಸುರೇಶ್ ಬಾಬು ಲಖನೌಗೆ ತೆರಳಿದ್ದಾಗ ಏರ್ ಪೋರ್ಟ್ ನಲ್ಲಿ ಕೊಲೆ ಆರೋಪಿ ಧರ್ಮೇಂದ್ರ ಕುಮಾರ್ ಕಣ್ಣಿಗೆ ಬಿದ್ದಿದ್ದಾನೆ.

ತಕ್ಷಣ ಅಲರ್ಟ್ ಆದ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ.

Join Whatsapp