ನರಗುಂದ: ಇತ್ತೀಚೆಗೆ ಗದಗ ಜಿಲ್ಲೆಯ ನರಗುಂದದಲ್ಲಿ ಸಮೀರ್ ಸುಭಾನ್ ಎಂಬ ಯುವಕನನ್ನು ಹತ್ಯೆಗೈದು ಬಜರಂಗದಳದ ಕಾರ್ಯಕರ್ತರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ನೀಡುವಂತೆ ನರಗುಂದ ಪೊಲೀಸರು ಮನವಿ ಮಾಡಿದ್ದಾರೆ.
ಪ್ರಮುಖ ಆರೋಪಿಗಳು ಬಜರಂಗದಳದ ಮುಖಂಡರಾದ ಬಸವರಾಜ ಗುಡೇಕಾರ ಮತ್ತು ಲಕ್ಷ್ಮಣ ಮಿಸಾಳೆ ಎಂದು ಗುರುತಿಸಲಾಗಿದೆ. ಬಸವರಾಜ ಗುಡೇಕಾರ ನರಗುಂದ ಠಾಣಾ ವ್ಯಾಪ್ತಿಯ ಪ್ರಕರಣವೊಂದರ ಆರೋಪಿಯಾಗಿದ್ದಾನೆ. ಈತನ ಸಹಾಯದೊಂದಿಗೆ ಇಬ್ಬರೂ ತಲೆ ಮರೆಸಿಕೊಂಡು ಬೆಳಗಾವಿ ಜಿಲ್ಲೆಯಲ್ಲಿ ತಿರುಗಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳು ಬೆಳಗಾವಿ ಜಿಲ್ಲೆಯಲ್ಲಿ ಕೆಎ 03 ಎಜೆ 4355 ನಂಬರಿನ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಸುತ್ತಾಡಿಕೊಂಡಿದ್ದಾರೆ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಈ ನಂಬರಿನ ಕಾರು ಕಂಡು ಬಂದಲ್ಲಿ ತಕ್ಷಣವೇ 9480804456/9448444191 ನಂಬರ್ ಗೆ ಮಾಹಿತಿ ನೀಡಬೇಕೆಂದು ನರಗುಂದ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.