ಅಪ್ರಾಪ್ತನ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಕೊಲೆ| ಬ್ರೈನ್ ಮ್ಯಾಫಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ವಕೀಲ

Prasthutha|

ಬೆಂಗಳೂರು: ಕನಕಪುರ  ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ಬ್ರೈನ್ ಮ್ಯಾಫಿಂಗ್ ಪರೀಕ್ಷೆ  ಮೂಲಕ ಅಪ್ರಾಪ್ತ ಬಾಲಕನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಕೊಲೆಗೈದ ಪ್ರಕರಣವನ್ನು ಭೇದಿಸಿದ್ದಾರೆ.

- Advertisement -

ನೂತನ ತಂತ್ರಜ್ಞಾನದ ಮೂಲಕ ಆರೋಪಿಗಳಾದ ವಕೀಲ ಶಂಕರೇಗೌಡ ಹಾಗೂ ಅವನ ಸ್ನೇಹಿತ ಅರುಣ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ 2022 ಮೇ 19 ರಂದು ಕನಕಪುರದ 17 ರ ಅಪ್ರಾಪ್ತ ಬಾಲಕನ ಜೊತೆ ಕನಕಪುರದಲ್ಲಿ ಈ ಇಬ್ಬರು ಅಸಹಜ ಲೈಂಗಿಕ ಕ್ರಿಯೆ ನಡೆಸಿ ಕೊಲೆ ಮಾಡಿರುವ ಆರೋಪವಿದೆ.

ಮೇ 19 ರಂದು ತನ್ನ 17 ವರ್ಷದ ಮಗ ಪರಿಚಿತ ವಕೀಲರ ಕಚೇರಿ ಶಿಫ್ಟ್ ಮಾಡುತ್ತಿದ್ದು ಕೆಲಸಕ್ಕೆ ಕರೆದಿರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆಂದು ಬಾಲಕನ ತಾಯಿ ಕನಕಪುರ ಠಾಣೆಗೆ ದೂರು‌ ನೀಡಿದ್ದರು.

- Advertisement -

ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ದೂರಿನ ಹಿನ್ನಲೆ ಕೇಸ್ ತನಿಖೆ ವೇಳೆ ಅಸಹಜ ಲೈಂಗಿಕ ಕ್ರಿಯೆ ಆರೋಪದಲ್ಲಿ ವಕೀಲ ಶಂಕರೇಗೌಡ ಮತ್ತು ಅರುಣ್ ಮೇಲೆ ಐಪಿಸಿ ಸೆಕ್ಷನ್ 377 ಅಡಿ ಕೇಸ್ ದಾಖಲಿಸಿದ್ದ ಕನಕಪುರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್​ನ್ನು ಕೂಡ ಸಲ್ಲಿಕೆ ಮಾಡಿದ್ದರು. ಆದರೆ ಆರೋಪಿಗಳಿಬ್ಬರು ಬಾಲಕ ನಿಗೂಢ ನಾಪತ್ತೆ ಕುರಿತು ಬಾಯಿಬಿಟ್ಟಿರಲಿಲ್ಲ.

ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕಾನೂನು ಪ್ರಕ್ರಿಯೆಯಂತೆ ಕ್ರಮವಹಿಸಿ ನೂತನ ಟೆಕ್ನಾಲಜಿ ಆಧಾರಿತ ವ್ಯವಸ್ಥೆ ಆಧರಿಸಿ ಬ್ರೈನ್ ಮ್ಯಾಫಿಂಗ್ ಒಳಪಡಿಸಿದಾಗ ಸತ್ಯಾಂಶ ರಿವೀಲ್ ಆಗಿದ್ದು, ಅಪ್ರಾಪ್ತನನ್ನು ಕಚೇರಿ ಶಿಫ್ಟ್ ಮಾಡುವ ನೆಪವೊಡ್ಡಿ ಕರೆಸಿಕೊಂಡು, ಪ್ರಜ್ಞೆ ತಪ್ಪಿಸಿ ಲೈಂಗಿಕ ಕ್ರಿಯೆ ನಡೆಸಿ ಆ ಬಳಿಕ ನೀರಿನಲ್ಲಿ ಮುಳುಗಿಸಿ ಕೊಲೆ ನಡೆಸಿರುವುದಾಗಿ ರಿವೀಲ್ ಮಾಡಿದ್ದಾರೆ. ಇದರಿಂದ  ಬ್ರೈನ್ ಮ್ಯಾಫಿಂಗ್ ಪರೀಕ್ಷೆಯ ಬಳಿಕ ಅಪ್ರಾಪ್ತನ ಹತ್ಯೆ ಆರೋಪಕ್ಕೆ ಸಂಬಂಧಿಸಿ ಪೊಲೀಸರಿಗೆ ಪ್ರಬಲವಾದ ಸಾಕ್ಷಾಧಾರ ಲಭ್ಯವಾದಂತಾಗಿದೆ.

ತಂತ್ರಜ್ಞಾನದ ಆಧಾರದ ಮೇಲೆ ಐಪಿಸಿ ಸೆಕ್ಷನ್ 377 ಅಡಿ ಅಸಹಜ ಲೈಂಗಿಕ ಕ್ರಿಯೆ ಆರೋಪದ ಜತೆಗೆ ಐಪಿಸಿ ಸೆಕ್ಷನ್ 302 ಅಡಿ ಪ್ರಕರಣ ದಾಖಲಿಸಿದ್ದಾರೆ.



Join Whatsapp