ತುಮಕೂರಿನ ಎಪಿಎಂಸಿಯಲ್ಲಿ ಕತ್ತು ಸೀಳಿ ಯುವಕನ ಹತ್ಯೆ

Prasthutha|

ತುಮಕೂರು: ಯುವಕನೋರ್ವನನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ಎಪಿಎಂಸಿಯಲ್ಲಿ ನಡೆದಿದೆ.

- Advertisement -

ಮೃತನನ್ನು ಬಿಹಾರ ಮೂಲದ ಲಖನ್ ಮಾನ್ಸಿ (32) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ 5 ಗಂಟೆಯ ಸುಮಾರಿಗೆ ಈ ಕೊಲೆ ನಡೆದಿದೆ. ಮಾನ್ಸಿ ಕಳೆದ 6 ತಿಂಗಳಿಂದ ತುಮಕೂರಿನ ಅಂತರಸನಹಳ್ಳಿ ಬಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಟಾಯ್ಲೆಟ್ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ.

ಕೊಲೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Join Whatsapp