ಬೆಂಗಳೂರು : ರಾಜ್ಯದ 10 ಮಹಾನಗರ ಪಾಲಿಕೆ, ನಗರಸಭೆಗಳ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಸರಕಾರದಿಂದ ಈ ಕುರಿತ ಅಧಿಕೃತ ಆದೇಶ ಹೊರಬಿದ್ದಿದೆ.
ಮಹಾನಗರ ಪಾಲಿಕೆ, ನಗರಸಭೆಗಳ ಮೇಯರ್, ಉಪ ಮೇಯರ್ ಮೀಸಲಾತಿ ನಿಗದಿಗೆ ಸಂಬಂಧಿಸಿ ಸರಕಾರ ಜ.21ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಿತ್ತು.
ವಿವಿಧ ಮಹಾನಗರ ಪಾಲಿಕೆ, ನಗರಸಭೆಗಳ ಮೇಯರ್, ಉಪ ಮೇಯರ್ ಮೀಸಲಾತಿ ಈ ಕೆಳಗಿನಂತಿವೆ.
ಬಳ್ಳಾರಿ : ಮೇಯರ್ –ಸಾಮಾನ್ಯ ವರ್ಗ, ಉಪ ಮೇಯರ್ – ಹಿಂದುಳಿದ ವರ್ಗ ಮಹಿಳೆ
ಬೆಳಗಾವಿ : ಮೇಯರ್ – ಸಾಮಾನ್ಯ ವರ್ಗ, ಉಪ ಮೇಯರ್ – ಸಾಮಾನ್ಯ ವರ್ಗ ಮಹಿಳೆ
ದಾವಣಗೆರೆ : ಮೇಯರ್ – ಪರಿಶಿಷ್ಟ ಜಾತಿ ಮಹಿಳೆ, ಉಪ ಮೇಯರ್-ಸಾಮಾನ್ಯ ವರ್ಗ ಮಹಿಳೆ
ಹುಬ್ಬಳ್ಳಿ-ಧಾರವಾಡ : ಮೇಯರ್ – ಹಿಂದುಳಿದ ವರ್ಗ-ಎ, ಉಪ ಮೇಯರ್-ಪರಿಶಿಷ್ಟ ಜಾತಿ ಮಹಿಳೆ
ಕಲಬುರಗಿ : ಮೇಯರ್ – ಸಾಮಾನ್ಯ ವರ್ಗ ಮಹಿಳೆ, ಉಪ ಮೇಯರ್ ಹಿಂದುಳಿದ ವರ್ಗ-ಬಿ
ಮಂಗಳೂರು : ಮೇಯರ್ – ಸಾಮಾನ್ಯ ವರ್ಗ, ಉಪ ಮೇಯರ್ – ಹಿಂದುಳಿದ ವರ್ಗ-ಎ ಮಹಿಳೆ
ಮೈಸೂರು : ಮೇಯರ್- ಸಾಮಾನ್ಯ ವರ್ಗ ಮಹಿಳೆ, ಉಪ ಮೇಯರ್-ಸಾಮಾನ್ಯ
ಶಿವಮೊಗ್ಗ : ಮೇಯರ್ ಹಿಂದುಳಿದ ವರ್ಗ-ಎ ಮಹಿಳೆ, ಉಪ ಮೇಯರ್-ಸಾಮಾನ್ಯ ವರ್ಗ
ತುಮಕೂರು : ಮೇಯರ್- ಪರಿಶಿಷ್ಟ ಜಾತಿ, ಉಪ ಮೇಯರ್- ಸಾಮಾನ್ಯ ವರ್ಗ ಮಹಿಳೆ
ವಿಜಯಪುರ : ಮೇಯರ್-ಸಾಮಾನ್ಯ ವರ್ಗ, ಉಪ ಮೇಯರ್- ಹಿಂದುಳಿದ ವರ್ಗ-ಎ ಮೀಸಲು