ಹಿಂದಿ ಬಿಗ್ ಬಾಸ್ ಟ್ರೋಫಿ ಗೆದ್ದ ಮುನಾವರ್ ಫಾರೂಕಿ

Prasthutha|

ಮುಂಬೈ: ಹಿಂದಿ ಬಿಗ್ ಬಾಸ್ ಟ್ರೋಫಿ ಮುನಾವರ್ ಫಾರೂಕಿ ಗೆದ್ದಿದ್ದಾರೆ. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 17 ರ ಫಿನಾಲೆ ಅದ್ಧೂರಿಯಾಗಿ ನಡೆದಿದ್ದು, ನೂರು ದಿನಗಳ ಹೋರಾಟ, ಕಿರುಚಾಟ ಹಾಗೂ ಕೆಲವರ ತಾಳ್ಮೆಯ ಆಟದಿಂದ ಕಾರ್ಯಕ್ರಮ ಗಮನ ಸೆಳೆದಿತ್ತು.

- Advertisement -

ಫಿನಾಲೆಯಲ್ಲಿ ಅಂತಿಮವಾಗಿ ಮುನಾವರ್ ಫಾರೂಕಿ, ಅಂಕಿತಾ ಲೋಖಂಡೆ, ಮನ್ನಾರಾ ಚೋಪ್ರಾ, ಅಭಿಷೇಕ್ ಕುಮಾರ್ ಮತ್ತು ಅರುಣ್ ಮಾಶೆಟ್ಟಾ ಫೈನಲಿಸ್ಟ್ ಆಗಿದ್ದರು. ಒಬ್ಬೊಬ್ಬರು ಎಲಿಮಿನೇಟ್ ಆಗಿ, ಅಂತಿಮವಾಗಿ ಇಬ್ಬರು ಉಳಿದಿದ್ದರು.ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಬೆಂಬಲವನ್ನು ಪಡೆದಿರುವ ಮುನಾವರ್ ಫಾರೂಕಿ ಹಾಗೂ ವೀಕ್ಷಕರ ಮನಗೆದ್ದ ಅಭಿಷೇಕ್ ಕುಮಾರ್ ಅಂತಿಮವಾಗಿ ಟಾಪ್ 2 ನಲ್ಲಿ ಕಾಣಿಸಿಕೊಂಡಿದ್ದರು. ಕೊನೆಗೆ ತನ್ನ ವ್ಯಕ್ತಿತ್ವ ಹಾಗೂ ಹಾಸ್ಯ ಪ್ರಜ್ಞೆಯಿಂದ ಗಮನ ಸೆಳೆದಿರುವ ಮುನಾವರ್ ಫಾರೂಕಿ ಬಿಗ್ ಬಾಸ್ ಗೆದ್ದಿದ್ದು, 50 ಲಕ್ಷ ನಗದು ಮತ್ತು ಕಾರನ್ನು ಪಡೆದುಕೊಂಡಿದ್ದಾರೆ.

ವೃತ್ತಿಯಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿರುವ ಮುನಾವರ್, ಗಾಯಕ ಕೂಡ ಹೌದು. ಅವರು ಹಾಸ್ಯದಿಂದಲೇ ಜೈಲು ಸೇರಿ ಬಂದಿದ್ದರು ಎಂಬುದು ಗಮನಾರ್ಹ!

Join Whatsapp