ಗುಜರಾತಿನಲ್ಲಿ ಮುನಾವರ್ ಫಾರೂಖಿ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ: ಬಜರಂಗದಳ ಬೆದರಿಕೆ

Prasthutha|

ಅಹಮದಾಬಾದ್: ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಖಿ ಅವರಿಗೆ ಗುಜರಾತ್ ನಲ್ಲಿ ಕಾರ್ಯಕ್ರಮ ನೀಡಲು ಅವಕಾಶ ನೀಡುವುದಿಲ್ಲ ಎಂದು ಬಜರಂಗದಳ ಬೆದರಿಕೆ ಹಾಕಿದೆ.

- Advertisement -

ಹಿಂದೂ ದೇವತೆಗಳು ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರೊಬ್ಬರ ದೂರಿನ ಹಿನ್ನೆಲೆಯಲ್ಲಿ ಮುನಾವರ್ ಫಾರೂಕಿ ಜೈಲು ಶಿಕ್ಷೆ ಅನುಭವಿಸಿದ್ದರು. ಫಾರೂಖಿಯವರು ಅಕ್ಟೋಬರ್ 1ರಂದು ಗುಜರಾತ್ ಭೇಟಿ ಮಾಡಲಿದ್ದಾರೆ.

ಗುಜರಾತ್‌ನಲ್ಲಿ ಕಾರ್ಯಕ್ರಮ ಘೋಷಣೆಯಾದ ನಂತರ ಫಾರೂಖಿಗೆ ಹಲವಾರು ಬೆದರಿಕೆ ಸಂದೇಶಗಳು ಮತ್ತು ಎಚ್ಚರಿಕೆಗಳು ಬರುತ್ತಾ ಇದೆ. ಆತ ಕಾರ್ಯಕ್ರಮದ ಮೂಲಕ ಹಿಂದೂ ಧರ್ಮದ ಮೇಲೆ ದಾಳಿ ಮಾಡುತ್ತಿದ್ದು, ಹಿಂದೂ ಸಮುದಾಯದ ಭಾವನೆಗಳನ್ನು ಹಾಸ್ಯಮಯವಾಗಿ ನೋಯಿಸುತ್ತಾನೆ. ಬಜರಂಗದಳವು ಇಂತಹ ಕೃತ್ಯಗಳನ್ನು ಪ್ರೋತ್ಸಾಹಿಸುವುದಿಲ್ಲ’ ಎಂದು ಗುಜರಾತ್ ಬಜರಂಗದಳದ ನಾಯಕ ಜ್ವಾಲಿತ್ ಮೆಹ್ತಾ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.

- Advertisement -

ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಮುನಾವರ್ ಫಾರೂಖಿಯನ್ನು ಕೇಳಿಕೊಳ್ಳುತ್ತಿದ್ದೇನೆ. ಅದಾಗ್ಯೂ ಕಾರ್ಯಕ್ರಮವನ್ನು ಮುಂದುವರಿಸುವುದಾದರೆ ದೈಹಿಕ, ಆರ್ಥಿಕ ಮತ್ತು ಮಾನಸಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬಜರಂಗದಳದ ನಾಯಕ ಎಚ್ಚರಿಸಿದ್ದಾರೆ.

ಜನವರಿಯಲ್ಲಿ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಫಾರೂಖಿಯನ್ನು ಪೊಲೀಸರು ಬಂಧಿಸಿದ್ದರು. ಈ ಕಾರ್ಯಕ್ರಮದ ಮೂಲಕ ಹಿಂದೂ ದೇವರನ್ನು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅವಮಾನಿಸಲಾಗಿದೆ ಎಂದು ಬಿಜೆಪಿ ಶಾಸಕರೊಬ್ಬರ ಮಗನ ದೂರಿನ ಹಿನ್ನೆಲೆಯಲ್ಲಿ ಮುನಾವರ್ ಫಾರೂಕಿಯನ್ನು ಬಂಧಿಸಲಾಗಿತ್ತು.



Join Whatsapp