ಪಿಜ್ಜಾ ಆರ್ಡರ್​ ಮಾಡಿದ್ದ ಅಜ್ಜಿಯಿಂದ ₹11 ಲಕ್ಷ ಎಗರಿಸಿದ ಖದೀಮರು!

Prasthutha|

ಮುಂಬೈ: ಪಿಜ್ಜಾ ಆರ್ಡರ್ ಮಾಡಿದ ಅಜ್ಜಿಯಿಂದ ಖದೀಮರು ಬರೋಬ್ಬರಿ 11 ಲಕ್ಷ ರೂ. ಎಗರಿಸಿದ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

- Advertisement -

ಅಜ್ಜಿ ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದು, ಅದಕ್ಕಾಗಿ ಹಣ ಕೂಡ ಕಳುಹಿಸಿದ್ದರು. ಆದರೆ, ಅವರು ತಪ್ಪಾಗಿ ಬಿಲ್‌ಗಿಂತ ಹೆಚ್ಚಿನ ಹಣವನ್ನು ಕಳುಹಿಸಿಬಿಟ್ಟಿದ್ದಾರೆ. ಅದನ್ನು ಮರಳಿ ಪಡೆಯುವುದು ಹೇಗೆ? ಎಂದು ಆಕೆ ಮಾಹಿತಿಗಾಗಿ ಗೂಗಲ್‌ನಲ್ಲಿ ಸರ್ಚ್​ ಮಾಡಿದ್ದಾರೆ.

ಆ ವೇಳೆ ಗೂಗಲ್ ಮಾಹಿತಿಯಂತೆ ಯಾರಿಗೋ ಕರೆ ಮಾಡಿದ್ದಾರೆ. ಆಗ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಎಂದು  ಕೇಳಿ ಆ ಆ್ಯಪ್‌ನಿಂದ ಅಜ್ಜಿಯ ಬ್ಯಾಂಕ್ ವಿವರಗಳು ಮತ್ತು ಪಾಸ್‌ವರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ನಂತರ 11 ಲಕ್ಷಕ್ಕೂ ಹೆಚ್ಚು ಹಣವನ್ನು ಅವರ ಬ್ಯಾಂಕ್​ನಿಂದ ಎಗರಿಸಿದ್ದಾರೆ.

- Advertisement -

ಘಟನೆ ಸಂಬಂಧ ಅಜ್ಜಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭವಾಗಿದೆ.



Join Whatsapp