ನಟ ಸಲ್ಮಾನ್ ಖಾನ್ ಗೆ ಬೆದರಿಕೆ: ರಾಯಚೂರಿನ ಯುವಕನನ್ನು ಬಂಧಿಸಿದ ಮುಂಬೈ ಪೊಲೀಸರು

Prasthutha|

ರಾಯಚೂರು: ನಟ ಸಲ್ಮಾನ್ ಖಾನ್ ಹಾಗೂ ಅವರ ಸಿನಿಮಾದ ಗೀತೆ ರಚನೆಕಾರನಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಮಾನ್ವಿ ಪಟ್ಟಣದ ಸುಹೈಲ್ ಪಾಷಾ (23) ಎನ್ನುವವನನ್ನು ಮುಂಬೈ ಪೊಲೀಸರು ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ.

- Advertisement -


ಪಟ್ಟಣದ ವಾರ್ಡ್ ನಂ 5, ಶಾದಿ ಮಹಲ್ ಹತ್ತಿರದ ನಿವಾಸಿ, ಯುವಕ ಸುಹೈಲ್ ಪಾಷಾ ನವೆಂಬರ್ 7ರಂದು ಮುಂಬೈ ನಗರದ ಪೊಲೀಸರ ವಾಟ್ಸಪ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ‘ನನಗೆ ₹5 ಕೋಟಿ ನೀಡದಿದ್ದರೆ, ಸಲ್ಮಾನ್ ಖಾನ್ ಮತ್ತು ‘ ಮೈ ಸಿಕಂದರ್ ಹೂಂ’ ಗೀತೆಯ ರಚನೆಕಾರನನ್ನು ಕೊಲ್ಲುವೆ’ ಎಂದು ಬೆದರಿಕೆ ಹಾಕಿದ್ದನು ಎನ್ನಲಾಗಿದೆ.


ಗೀತರಚನೆಕಾರ ಇನ್ನು ಮುಂದೆ ಹಾಡುಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಸಲ್ಮಾನ್ ಖಾನ್ ಅವರಿಗೆ ಧೈರ್ಯವಿದ್ದರೆ ಅವರನ್ನು ಉಳಿಸಿ’ ಎಂದು ಬೆದರಿಕೆ ಸಂದೇಶವನ್ನು ವಾಟ್ಸಪ್ ಮೂಲಕ ಕಳುಹಿಸಿದ್ದ ಎಂದು ಗೊತ್ತಾಗಿದೆ.

- Advertisement -


ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಪೋನ್ ಸಂಖ್ಯೆಯ ಮಾಹಿತಿಯೊಂದಿಗೆ ತನಿಖೆ ಚುರುಕುಗೊಳಿಸಿದ ಮುಂಬೈ ನಗರದ ಅಪರಾಧ ವಿಭಾಗದ ಪೊಲೀಸರು ಮಾನ್ವಿ ಪಟ್ಟಣಕ್ಕೆ ಆಗಮಿಸಿ ಒಂದು ವಾರ ಕಾಲ ಸ್ಥಳೀಯ ವಸತಿ ಗೃಹವೊಂದರಲ್ಲಿ ಮೊಕ್ಕಾಂ ಹೂಡಿ ಆರೋಪಿ ಪತ್ತೆಗೆ ಜಾಲ ಬೀಸಿದ್ದರು.



Join Whatsapp