ಮುಂಬೈ: ಬಂಧಿತ ನವಾಬ್ ಮಲಿಕ್ ಇಡಿ ಕಸ್ಟಡಿ ಮಾರ್ಚ್ 7 ರವರೆಗೆ ವಿಸ್ತರಣೆ

Prasthutha|

ಪುಣೆ: ಭೂಗತಪಾತಕಿ ದಾವೂದ್ ಇಬ್ರಾಹೀಂ ಮತ್ತು ಆತನ ಸಹಚರರೊಂದಿಗೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳಿಂದ ಬಂಧಿತರಾದ ಸಚಿವ ನವಾಬ್ ಮಲಿಕ ಅವರ ಇಡಿ ಕಸ್ಟಡಿಯನ್ನು ವಿಶೇಷ ನ್ಯಾಯಾಲಯ ಮಾರ್ಚ್ 7 ರವರೆಗೆ ವಿಸ್ತರಿಸಿದೆ.

- Advertisement -

ದಕ್ಷಿಣ ಮುಂಬೈಯಲ್ಲಿರುವ ಜಾರಿ ನಿರ್ದೇಶನಾಲಯದ (ಇಡಿ) ಕಚೇರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಫೆಬ್ರವರಿ 23 ರಂದು ನವಾಬ್ ಅವರನ್ನು ಬಂಧಿಸಲಾಗಿತ್ತು.

ಗುರುವಾರ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಆರ್.ಎನ್. ರೋಕಡೆ ಎದುರು ಸಚಿವ ನವಾಬ್ ಅವರನ್ನು ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಮಾರ್ಚ್ 7 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದೆ.

Join Whatsapp