ಮುಂಬೈ: ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಅಧಿಕಾರಿಯಂತೆ ನಟಿಸಿ ಘಾಟ್’ಕೋಪರ್ ಹೋಟೆಲ್ಗಳನ್ನು ಶೋಧಿಸುತ್ತಿದ್ದ ವ್ಯಕ್ತಿಯನ್ನು ಬುಧವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ದೀಪಕ್ ನಕಲಿ ಸಿಬಿಐ ಗುರುತಿನ ಚೀಟಿಯನ್ನು ತೋರಿಸಿ ಘಾಟ್ಕೋಪರ್ ಹೋಟೆಲ್ಗಳನ್ನು ಶೋಧಿಸುತ್ತಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ದೀಪಕ್ ಹೋಟೆಲ್’ನ ರಿಜಿಸ್ಟರ್’ಗಳನ್ನು ಶೋಧಿಸಿ ಅಲ್ಲಿ ತಂಗಿರುವ ಗ್ರಾಹಕರ ವಿವರಗಳನ್ನು ಪರಿಶೀಲಿಸುತ್ತಿದ್ದನು. ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನ ಗುರುತಿನ ಚೀಟಿಯನ್ನು ಪರಿಶೀಲಿಸಿದಾಗ, ಅದು ನಕಲಿ ಎಂದು ಕಂಡುಬಂದಿದೆ. ನಂತರ ಘಾಟ್’ಕೋಪರ್ ಪೊಲೀಸರು ಎಫ್’ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.