ಭಯೋತ್ಪಾದಕ ವಿರುದ್ಧದ ಅಣಕು ಪ್ರದರ್ಶನದಲ್ಲಿ ಮುಸ್ಲಿಮರ ವೇಷ: ಮುಂಬೈ ಹೈಕೋರ್ಟ್ ಗರಂ

Prasthutha|

ನವದೆಹಲಿ: ಪೊಲೀಸ್ ಸಿಬ್ಬಂದಿ ಅಣಕು ಪ್ರದರ್ಶನ ಮಾಡುವಾಗ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಂತೆ ತೋರಿಸುವುದಕ್ಕೆ ನಿರ್ಬಂಧಿಸಿ ಮುಂಬೈ ಹೈಕೋರ್ಟ್’ನ ಔರಂಗಾಬಾದ್ ಪೀಠವು ಮಧ್ಯಂತರ ಆದೇಶ ಹೊರಡಿಸಿದೆ.

- Advertisement -


ಸಾಮಾಜಿಕ ಕಾರ್ಯಕರ್ತ ಸಯ್ಯದ್ ಉಸಾಮಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ.
ಇಂತಹ ಅಣಕು ಕಸರತ್ತುಗಳು ಮುಸ್ಲಿಂ ಸಮುದಾಯದ ವಿರುದ್ಧ ಪಕ್ಷಪಾತ ಮತ್ತು ಪೂರ್ವಗ್ರಹವನ್ನು ತೋರಿಸುತ್ತವೆ. ಭಯೋತ್ಪಾದಕರು ನಿರ್ದಿಷ್ಟ ಧರ್ಮಕ್ಕೆ ಮಾತ್ರ ಸೇರಿದವರು ಎಂಬ ಸಂದೇಶವನ್ನು ನೀಡುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.


ನ್ಯಾಯಮೂರ್ತಿಗಳಾದ ಮಂಗೇಶ್ ಪಾಟೀಲ್ ಮತ್ತು ಎ ಎಸ್ ಚಾಪಲ್ಗಾಂವ್ಕರ್ ಅವರ ವಿಭಾಗೀಯ ಪೀಠವು ಅಣಕು ಡ್ರಿಲ್ ಗಳನ್ನು ನಡೆಸುವ ಮಾರ್ಗಸೂಚಿಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್’ಗೆ ಸೂಚಿಸಿದೆ.

- Advertisement -


ಅಹಮದ್’ನಗರ, ಚಂದ್ರಾಪುರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ನಡೆದ ಮೂರು ಅಣಕು ಡ್ರಿಲ್’ಗಳಲ್ಲಿ ಭಯೋತ್ಪಾದಕರ ಪಾತ್ರವನ್ನು ವಹಿಸಿದ ಪೊಲೀಸರು ಮುಸ್ಲಿಂ ಸಮುದಾಯದ ಪುರುಷರಂತೆ ಬಟ್ಟೆ ಧರಿಸಿರುವುದನ್ನು ಪಿಐಎಲ್ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.


ಭಯೋತ್ಪಾದಕನು ಮುಸ್ಲಿಂ ಎಂದು ಸೂಚಿಸುವ ರೀತಿಯಲ್ಲಿ ಪೊಲೀಸ್ ಇಲಾಖೆಯು ಅಣಕು ಡ್ರಿಲ್ ಗಳನ್ನು ನಡೆಸುವುದು ಮತ್ತು ಘೋಷಣೆಗಳನ್ನು ಕೂಗುವುದನ್ನು ತಪ್ಪು ಎಂದು ನ್ಯಾಯಾಲಯ ಹೇಳಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ಫೆಬ್ರವರಿ 10 ರಂದು ನಡೆಸುವುದಾಗಿ ಹೇಳಿ ವಿಚಾರಣೆಯನ್ನು ಪೀಠ ಮುಂದೂಡಿದೆ.

Join Whatsapp