ಮುಂಬಯಿ: ಅಂಧೇರಿ ಪೂರ್ವ ವಿಧಾನ ಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಬೆಂಬಲಿತೆ ಶಿವಸೇನಾ ಅಭ್ಯರ್ಥಿ ರುತುಜಾ ಲಟ್ಕೆ 64,959 ಮತಗಳ ಅಂತರದ ನಿರೀಕ್ಷಿತ ಜಯ ಸಾಧಿಸಿದ್ದಾರೆ.
ಮೇ ನಲ್ಲಿ ಶಿವಸೇನೆಯ ಶಾಸಕ ರಮೇಶ್ ಲಟ್ಟೆ ಅವರು ನಿಧನರಾಗಿದ್ದರು. ಶಿವಸೇನೆಯು ರಮೇಶ್ ಅವರ ಪತ್ನಿ ರುತುಜಾ ಲಟೈ ಅವರನ್ನೇ ಕಣಕ್ಕಿಳಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯು ತನ್ನ ಜಂಟಿ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಿತ್ತು. ನವೆಂಬರ್ 3ರಂದು ಮತದಾನ ನಡೆದಿತ್ತು.
ಎನ್ ಸಿಪಿ, ಕಾಂಗ್ರೆಸ್ ಮತ್ತು ವಿಬಿಎ ಬೆಂಬಲಕ್ಕಾಗಿ ಉದ್ಧವ್ ಠಾಕ್ರೆ ಧನ್ಯವಾದಗಳನ್ನು ಅರ್ಪಿಸಿದ್ದು, ನೋಟಾಕ್ಕೆ ಮತ ಹಾಕುವಂತೆ ಪ್ರಚಾರ ಮಾಡಿದ್ದಕ್ಕಾಗಿ ಬಿಜೆಪಿಯನ್ನು ಟೀಕಿಸಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದರೆ ನೋಟಾ ಮತಗಳು ಅವರ ಪಾಲಾಗುತ್ತಿದ್ದವು ಎಂದರು