ಕೋರ್ಟ್ ಹಾಜರಾತಿಯಿಂದ ಶಾಶ್ವತ ವಿನಾಯಿತಿಗೆ ಕಂಗನಾ ರನೌತ್ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಮುಂಬೈ ಕೋರ್ಟ್

Prasthutha|

► ಕಂಗನಾ ನಟಿಯಾಗಿರಬಹುದು, ಆದರೆ ಒಂದು ಪ್ರಕರಣದ ಆರೋಪಿಯೆಂಬುವುದನ್ನು ಮರೆಯಬಾರದು

- Advertisement -

ಮುಂಬೈ: ತಾನು ಹಿಂದಿ ಸಿನಿಮಾ ರಂಗದ ಒಬ್ಬಳು ನಟಿಯಾಗಿದ್ದು, ದೇಶ – ವಿದೇಶಗಳಿಗೆ ಚಲನಚಿತ್ರಾ ಕಾರ್ಯದ ಪ್ರಯುಕ್ತ ಸಂಚರಿಸಬೇಕಾಗುತ್ತದೆ. ಆದ್ದರಿಂದ ಕೋರ್ಟ್ ಹಾಜರಾತಿಯಿಂದ ಶಾಶ್ವತ ವಿನಾಯಿತಿ ನೀಡಬೇಕು’ ಎಂದು ಕೋರಿದ್ದ ಅರ್ಜಿಯನ್ನು ಮುಂಬೈ ಸ್ಥಳೀಯ ಕೋರ್ಟ್ ತಿರಸ್ಕರಿಸಿದೆ.

ಅರ್ಜಿಯನ್ನು ವಜಾಗೊಳಿಸಿದ ಅಂಧೇರಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್‌ ಆರ್‌ ಖಾನ್ ” ಕಂಗನಾ ರನೌತ್ ಒಬ್ಬ ನಟಿಯಾಗಿರಬಹುದು. ಆದರೆ ಒಂದು ಪ್ರಕರಣದ ಆರೋಪಿಯೆಂಬುವುದನ್ನು ಮರೆಯಬಾರದು. ಆರೋಪಿಯು ತನಗಿಷ್ಟ ಬಂದಹಾಗೆ ವರ್ತಿಸಲು ಅವಕಾಶ ಇಲ್ಲ. ಸದ್ಯಕ್ಕೆ ಅವರು ವಿಚಾರಣೆಯಿಂದ ಶಾಶ್ವತ ವಿನಾಯಿತಿ ಕೋರುವಂತಿಲ್ಲ” ಎಂದಿದ್ದಾರೆ.

- Advertisement -

ಬಾಲಿವುಡ್‌ ಸಂಗೀತ ರಚನಾಗಾರ ಜಾವೇದ್‌ ಅಖ್ತರ್‌ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಎದುರಿಸುತ್ತಿರುವ ಕಂಗನಾ, ಶಾಶ್ವತ ವಿನಾಯಿತಿಗೆ ಅರ್ಜಿ ಕೋರಿದ್ದರು.




Join Whatsapp