ಮುಂಬೈ: ಕ್ರೀಡಾ ಸಂಕೀರ್ಣ ಉದ್ಯಾನವನಕ್ಕೆ ಟಿಪ್ಪು ನಾಮಕರಣ ವಿರೋಧಿಸಿದ ಬಿಜೆಪಿ ಕಾರ್ಯಕರ್ತರ ಬಂಧನ

Prasthutha|

ಪುಣೆ: 18ನೇ ಶತಮಾನದ ಮೈಸೂರು ಆಡಳಿತಗಾರ ಟಿಪ್ಪು ಸುಲ್ತಾನ್ ಹೆಸರನ್ನು ಮಲ್ನಾಡು ಕ್ರೀಡಾ ಸಂಕೀರ್ಣದಲ್ಲಿರುವ ಉದ್ಯಾನವನಕ್ಕೆ ನಾಮಕರಣ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

- Advertisement -

ಪ್ರತಿಭಟನಕಾರರ ವಿರುದ್ಧ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಉದ್ಯಾನದಲ್ಲಿ ನೂತನ ಸೌಲಭ್ಯಗಳನ್ನು ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ, ಸಚಿವ ಅಸ್ಲಾಮ್ ಶೇಖ್, ಪ್ರಸಕ್ತ ಸ್ಥಳ ಯಾವಾಗಲೂ ಟಿಪ್ಪು ಸುಲ್ತಾನ್ ಹೆಸರನ್ನು ಹೊಂದಿದೆ ಮತ್ತು ಯಾವುದೇ ಹೊಸ ನಾಮಕರಣ ಮಾಡುವುದಿಲ್ಲ ಎಂದು ಹೇಳಿದರು.

- Advertisement -

ಮಲ್ನಾಡ್ ನಲ್ಲಿರುವ ಟಿಪ್ಪು ಸುಲ್ತಾನ್ ಮೈದಾನ ಜನಮನ್ನಣೆ ಗಳಿಸಿದೆ. ಕಳೆದ 70 ವರ್ಷಗಳಲ್ಲಿ ಇದರ ಹೆಸರಿನಲ್ಲಿ ಯಾವುದೇ ಸಂಘರ್ಷ ನಡೆದಿಲ್ಲ. ಆದರೆ ಇಂದು ಸಂಘಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ದೇಶವನ್ನು ಅಭಿವೃದ್ಧಿಗೊಳಿಸಲು ಬಿಡುತ್ತಿಲ್ಲ. ನಾಮಕರಣದ ಬಗ್ಗೆ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

ಈ ಪ್ರತಿಭಟನೆಯಲ್ಲಿ ಮುಂಬೈ ಬಿಜೆಪಿ ಅಧ್ಯಕ್ಷ ಮಂಗಲ್ ಪ್ರಭಾತ್ ಲೋಧಾ, ಶಾಸಕ ಅತುಲ್ ಭಟ್ಕಳ್ ಕರ್, ರಾಜ್ಯ ಪರಿಷತ್ತಿನ ವಿರೋಧ ಪಕ್ಷದ ನಾಯಕ ಪ್ರವೀಣ್ ದಾರೆಕರ್, ಗೋಪಾಲ್ ಶೆಟ್ಟಿ, ಉಪಾಧ್ಯಕ್ಷ ಪವನ್ ತ್ರಿಪಾಠಿ ಸೇರಿದಂತೆ ಹತ್ತಾರು ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಪ್ರತಿಭಟನಕಾರರನ್ನು ಬಂಧಿಸಿದ ಪೊಲೀಸರು ಚಾರ್ಕೋಪ್ ಠಾಣೆಗೆ ಕರೆದೊಯ್ದರು.

Join Whatsapp