ಮುಂಬೈ: ಎವರೆಸ್ಟ್ ಏರಿದ ಹತ್ತರ ಪೋರಿ

Prasthutha|

ಮಹಾರಾಷ್ಟ್ರ: ಮುಂಬೈ ವರ್ಲಿಯ 10 ವರ್ಷದ ಹುಡುಗಿಯೊಬ್ಬಳು ಹಿಮಾಲಯನ್ ಪರ್ವತ ಶ್ರೇಣಿಯ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ಮೊಟ್ಟ ಮೊದಲ ಅತ್ಯಂತ ಕಿರಿಯ ಭಾರತೀಯ ಪರ್ವತಾರೋಹಿ ಎನಿಸಿಕೊಂಡಿದ್ದಾರೆ.

- Advertisement -

ಬಾಂದ್ರಾ ಋಷಿಕುಲ ವಿದ್ಯಾಲಯದ ಐದನೇ ತರಗತಿ ವಿದ್ಯಾರ್ಥಿನಿಯಾಗಿರುವ ರಿದಂ ಮಾನಿಯಾ ಎವರೆಸ್ಟ್ ಏರಿರುವ ಧೀರೆ. ಯಾವುದೇ ಕೋಚಿಂಗ್ ಅಥವಾ ಔಪಚಾರಿಕ ತರಬೇತಿಯೇನೂ ಈಕೆ ಪಡೆಯಲಿಲ್ಲ. ಆದರೆ ಪ್ರತಿದಿನ ಮುಂಜಾನೆ ಮನೆಯ ಹತ್ತಿರದ  ಶಾಸ್ತ್ರಿ ಗಾರ್ಡನ್ ಪಕ್ಕದಲ್ಲಿರುವ ಎತ್ತರ ಹಾಗೂ ಕಡಿದಾದ ಮೆಟ್ಟಿಲುಗಳನ್ನು ಏರುವ ಮತ್ತು ಓಡುವ ಮೂಲಕ ಅಭ್ಯಾಸ ನಡೆಸಿದ್ದಳು.

ರಾಷ್ಟ್ರಮಟ್ಟದ ಚಾಂಪಿಯನ್ ಸ್ಕೇಟರ್ ಆಗಿರುವ ರಿದಂ ಮಾನಿಯಾ ತನ್ನ ಪೋಷಕರಾದ ಊರ್ಮಿ ಮತ್ತು ಹರ್ಷಲ್ ಜೊತೆ ಪರ್ವತದ ತುದಿ ತಲುಪಿದ್ದಾಳೆ. ಸ್ಕೇಟರ್ ಆಗಿರುವುದರಿಂದ ಆಕೆಯ ಕಾಲಿನ ಮಾಂಸಖಂಡಗಳು ಶಕ್ತಿಯುತವಾಗಿದ್ದು, ಪರ್ವತಾರೋಹಣಕ್ಕೆ ಯಾವುದೇ ತೊಡಕುಂಟಾಗಲಿಲ್ಲ. ತಾನು ಉಪಯೋಗಿಸಿದ ವಸ್ತುಗಳ ಕಸಗಳ ಸಹಿತ ವರ್ಷಗಳಾದರೂ ಮಣ್ಣಿನಲ್ಲಿ ಸೇರದ ಎಲ್ಲ ಕಸಗಳನ್ನೂ ಸಂಗ್ರಹಿಸಿ  ತಂದಿದ್ದಾಳೆ ಎಂದು ಆಕೆಯ ತಾಯಿ ತಿಳಿಸಿದ್ದಾರೆ.

- Advertisement -

ಮೇ 6ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ರಿದಂ ಮಾನಿಯಾ ತನ್ನ ಪೋಷಕರೊಂದಿಗೆ ಎವರೆಸ್ಟ್ ಬೇಸ್ ಕ್ಯಾಂಪ್ ನ ಶೃಂಗ ತಲುಪಿದ್ದಳು.



Join Whatsapp