ಬಹುಮಹಡಿ ಕಟ್ಟಡದ ಲಿಫ್ಟ್​ ಕುಸಿತ : 6 ಕಾರ್ಮಿಕರು ಮೃತ್ಯು

Prasthutha|

ಮುಂಬೈ: ಥಾಣೆಯ ಬಾಲ್ಕಮ್ ಪ್ರದೇಶದಲ್ಲಿ 40 ಅಡಿ ಅಂತಸ್ತಿನ ನಿರ್ಮಾಣ ಹಂತದ ಲಿಫ್ಟ್​ ಕುಸಿದು 6 ಕಾರ್ಮಿಕರು ಸಾವನ್ನಪ್ಪಿದ್ದಾರೆ, ಓರ್ವ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ಮಾತನಾಡಿ, ಇದು ನಿರ್ಮಾಣ ಹಂತದ ಲಿಫ್ಟ್ ಆಗಿದ್ದು, 40 ನೇ ಮಹಡಿಯಿಂದ ಕೆಳಕ್ಕೆ ಕುಸಿದಿತ್ತು. ಈ ಕಟ್ಟಡವು ಘೋಡ್‌ಬಂದರ್ ರಸ್ತೆಯಿಂದ ದೂರದಲ್ಲಿದೆ. ಲಿಫ್ಟ್‌ನ ಕೇಬಲ್‌ಗಳಲ್ಲಿ ಒಂದು ಸ್ನ್ಯಾಪ್ ಆಗಿದ್ದು, ರವಿವಾರ ಸಂಜೆ 5.30 ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.

ಮಾಹಿತಿ ಪಡೆದ ನಂತರ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನೆಲಮಾಳಿಗೆಯ ಪಾರ್ಕಿಂಗ್‌ನಿಂದ ಕಾರ್ಮಿಕರನ್ನು ಹೊರತೆಗೆದರು.

- Advertisement -

ಮೃತ ಕಾರ್ಮಿಕರನ್ನು ಮಹೇಂದ್ರ ಚೌಪಾಲ್ (32), ರೂಪೇಶ್ ಕುಮಾರ್ ದಾಸ್ (21), ಹರುಣ್ ಶೇಖ್ (47), ಮಿಥ್ಲೇಶ್ (35), ಮತ್ತು ಕರಿದಾಸ್ (38) ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

Join Whatsapp