ಮುಲಾಯಂ ಸಿಂಗ್ ಯಾದವ್ ನಿಧನ: ಗೂಗಲ್ ಎಡವಟ್ಟು

Prasthutha|

ಲಕ್ನೊ: ‘ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನ’ –  ಹೀಗೊಂದು ತಲೆಬರಹದ ವರದಿಯು ನಿಮ್ಮನ್ನು ಆಘಾತಗೊಳಿಸಬಹುದು. ಆದರೆ ತಲೆಬರಹದಾಚೆಗೆ ಸುದ್ದಿಯನ್ನು ಓದುವುದು ಒಳಿತು. ಏಕೆಂದರೆ ಸ್ವತ: ಗೂಗಲ್ ಈ ವಿಷಯದಲ್ಲಿ ಎಡವಟ್ಟು ಮಾಡಿಕೊಂಡಿದೆ.

ಗೂಗಲ್ ಸರ್ಚ್ ಇಂಜಿನ್ ನಲ್ಲಿ ಮುಲಾಯಂ ಸಿಂಗ್ ಯಾದವ್ ಎಂದು ನೀವು ಟೈಪ್ ಮಾಡಿದರೆ ಸಮಾಜವಾದಿ ಪಕ್ಷದ ಸ್ಥಾಪಕ-ಪೋಷಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ರ ಚಿತ್ರದೊಂದಿಗೆ ಪರಿಚಯವನ್ನು ತೋರಿಸುತ್ತದೆ. ಕೆಳಭಾಗದಲ್ಲಿ ಜನನ ನ.22, 1939, ಮರಣ ಅ.4, 2020 ಎಂಬುದಾಗಿ ಅದು ತೋರಿಸುತ್ತದೆ.

- Advertisement -

ವಾಸ್ತವದಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಸಾವನ್ನಪ್ಪಿರುವುದು ನಿಜವೇ ಆಗಿದ್ದರೂ ಅದು ಪಕ್ಷದ ಸ್ಥಾಪಕ ಮಾಜಿ ಮುಖ್ಯಮಂತ್ರಿಗಳಲ್ಲ. ಬದಲಾಗಿ ಪಕ್ಷದ ವಿಧಾನ ಪರಿಷತ್ ಸದಸ್ಯ ಮುಲಾಯಂ ಸಿಂಗ್ ರವರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಮುಲಾಯಂ ಸಿಂಗ್ ಶನಿವಾರದಂದು ಸಾವನ್ನಪ್ಪಿದ್ದರು. ಅವರು ಸತತ 20 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿದ್ದರು.

- Advertisement -