ಹಿರಿಯ ವಕೀಲ ಮುಕುಲ್ ರೋಹಟ್ಗಿ ಭಾರತದ ಮುಂದಿನ ಅಟಾರ್ನಿ ಜನರಲ್

Prasthutha|

ನವದೆಹಲಿ: ಭಾರತದ ಹದಿನಾಲ್ಕನೇ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರನ್ನು ನೇಮಿಸಲು ನಿರ್ಧರಿಸಲಾಗಿದೆ. ಕೆ ಕೆ ವೇಣುಗೋಪಾಲ್ ಅವರಿಂದ ಶೀಘ್ರವೇ ತೆರವಾಗಲಿರುವ ಹುದ್ದೆಯನ್ನು ರೋಹಟ್ಗಿ ಅಲಂಕರಿಸಲಿದ್ದಾರೆ.

- Advertisement -

ರೋಹಟ್ಗಿ ಅವರು ಎರಡನೇ ಬಾರಿಗೆ ಎಜಿ ಹುದ್ದೆ ಅಲಂಕರಿಸುತ್ತಿದ್ದಾರೆ. ಅವರು 2014ರಿಂದ 2017ರ ಅವಧಿಯಲ್ಲಿ ಈ ಸ್ಥಾನಕ್ಕೇರಿದ್ದರು. ಕೆ ಕೆ ವೇಣುಗೋಪಾಲ್ ಅವರು ಈ ಸೆಪ್ಟೆಂಬರ್ 30ರ ನಂತರ ತಮ್ಮನ್ನು ಹುದ್ದೆಯಲ್ಲಿ ಮುಂದುವರೆಸಬಾರದು ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು.

ಕಳೆದ ಜೂನ್‌ನಲ್ಲಿ ಎ ಜಿ ವೇಣುಗೋಪಾಲ್‌ ಅವರ ಅಧಿಕಾರಾವಧಿಯನ್ನು ಮೂರು ತಿಂಗಳ ಅವಧಿಗೆ ಇಲ್ಲವೇ ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿತ್ತು. ಇದೇ ಸೆ. 30ಕ್ಕೆ ಈ ಅವಧಿ ಕೊನೆಗೊಳ್ಳಲಿದೆ.

- Advertisement -

ವೇಣುಗೋಪಾಲ್ ಅವರನ್ನು ಮೂರು ವರ್ಷಗಳ ಅವಧಿಗೆ ಜುಲೈ 1, 2017ರಂದು ಅಟಾರ್ನಿ ಜನರಲ್ ಆಗಿ ನೇಮಿಸಲಾಗಿತ್ತು. ನಂತರ ಅದನ್ನು ಪ್ರತಿ ವರ್ಷಕ್ಕೊಮ್ಮೆಯಂತೆ ಎರಡು ಬಾರಿ ವಿಸ್ತರಿಸಲಾಗಿತ್ತು.

(ಕೃಪೆ: ಬಾರ್ ಆ್ಯಂಡ್ ಬೆಂಚ್)



Join Whatsapp