ಎರಡನೇ ಬಾರಿ ಅಟಾರ್ನಿ ಜನರಲ್ ಆಗಿ ಮುಕುಲ್ ರೋಹಟಗಿ ಆಯ್ಕೆ

Prasthutha|

ಹೊಸದಿಲ್ಲಿ: ಭಾರತದ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಎರಡನೆಯ ಅವಧಿಗೆ ನೇಮಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

- Advertisement -

ಈಗಿನ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲರಿಗೆ 91ರ ಪ್ರಾಯವಾಗಿದ್ದು, ಸೆಪ್ಟೆಂಬರ್ 30ಕ್ಕೆ ಅವರ ಅವಧಿ ಮುಗಿಯಲಿದೆ. ಈ ನಿಟ್ಟಿನಲ್ಲಿ ಮುಂದಿನ ಅಟಾರ್ನಿ ಜನರಲ್ ಆಗಿ ಮುಕುಲ್ ರೋಹಟಗಿ ಅವರನ್ನು  ನೇಮಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆ  ಮುಕುಲ್ ರೋಹಟಗಿ ಅವರು 2014ರಿಂದ 2017ರ ನಡುವೆ ಅಟಾರ್ನಿ ಜನರಲ್ ಆಗಿದ್ದರು.

ರೋಹಟಗಿಯವರು ಶಾರೂಕ್ ಖಾನ್ ಮಗನ ಮೊಕದ್ದಮೆ, ಲಖಿಂಪುರ ಖೇರಿ ಆಶಿಸ್ ಮಿಶ್ರಾ ಮೊಕದ್ದಮೆಗಳಲ್ಲಿ ಅವರ ಪರ ವಕೀಲರಾಗಿದ್ದರು.



Join Whatsapp