ಅಟಾರ್ನಿ ಜನರಲ್ ಆಗಿ ಮರಳುವ ಸರ್ಕಾರದ ಪ್ರಸ್ತಾಪ ತಿರಸ್ಕರಿಸಿದ ಮುಕುಲ್ ರೋಹಟಗಿ

Prasthutha|

ನವದೆಹಲಿ: ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಭಾರತದ ಅಟಾರ್ನಿ ಜನರಲ್ ಆಗಿ ಮರಳುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

67 ವರ್ಷದ ಮುಕುಲ್ ರೋಹಟಗಿ ಅವರು 2017ರ ಜೂನ್ ನಲ್ಲಿ ಅಟಾರ್ನಿ ಜನರಲ್ ಹುದ್ದೆಯಿಂದ ಕೆಳಗಿಳಿದಿದ್ದರು. ನಂತರ ಕೆ.ಕೆ. ವೇಣುಗೋಪಾಲ್ ಅವರನ್ನು 2017ರ ಜುಲೈನಲ್ಲಿ ಹುದ್ದೆಗೆ ನೇಮಿಸಲಾಗಿತ್ತು.

91 ವರ್ಷದ ಕೆ.ಕೆ ವೇಣುಗೋಪಾಲ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ವೇಣುಗೋಪಾಲ್ ಬದಲಿಗೆ ರೋಹಟಗಿ ಅವರಿಗೆ ಅಟಾರ್ನಿ ಜನರಲ್ ಹುದ್ದೆಯನ್ನು ನೀಡಲಾಗಿತ್ತು. ಆದರೆ ಈ ಪ್ರಸ್ತಾಪವನ್ನು ರೋಹಟಗಿ ನಿರಾಕರಿಸಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಅವರು ತಮ್ಮ ನಿರ್ಧಾರವನ್ನು ತಿಳಿಸಿದರು. ತಮ್ಮ ನಿರ್ಧಾರದ ಹಿಂದೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ ಎಂದು ರೋಹಟಗಿ ಹೇಳಿದ್ದಾರೆ.

- Advertisement -

ಅಟಾರ್ನಿ ಜನರಲ್ ಆಗಿ ವೇಣುಗೋಪಾಲ್ ಅವರ ಅವಧಿ 2020ರಲ್ಲಿ ಕೊನೆಗೊಳ್ಳಲಿದ್ದು, ತಮ್ಮನ್ನು ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಸರ್ಕಾರ ಅವರ ಅಧಿಕಾರವಧಿಯನ್ನು ಮುಂದುವರೆಸಿತ್ತು.

ಮುಕುಲ್ ರೋಹಟಗಿ ಅನುಭವಿ ವಕೀಲರೆಂದು ಹೆಸರುವಾಸಿಯಾಗಿದ್ದಾರೆ. ಗುಜರಾತ್ ಗಲಭೆ ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು. ಇದಲ್ಲದೆ, ಅವರು ದೇಶದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಅನೇಕ ಉನ್ನತ ಪ್ರಕರಣಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೇ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸಂಬಂಧಿಸಿದ ವಿಷಯದಲ್ಲೂ ವಾದ ಮಂಡಿಸಿದ್ದರು.



Join Whatsapp