ಮುಖೇಶ್ ಅಂಬಾನಿ ಏಷ್ಯಾದ ನಂಬರ್​ 1 ಶ್ರೀಮಂತ

Prasthutha|

ಮುಂಬೈ: ಜಾಗತಿಕ ಮಾಧ್ಯಮ ಕಂಪನಿಯಾದ ಫೋರ್ಬ್ಸ್ ಪ್ರಕಾರ, ಭಾರತದ ಉದ್ಯಮಿ ಮುಖೇಶ್ ಅಂಬಾನಿ ಏಷ್ಯಾದ ನಂ 1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಏಷ್ಯಾದ ಟಾಪ್​ ಟೆನ್​ ಶ್ರೀಮಂತರ ಪಟ್ಟಿಯಲ್ಲಿ ಇತರ ಮೂವರು ಭಾರತೀಯರೂ ಇದ್ದಾರೆ.

- Advertisement -

ಜನವರಿ 2024ರ ಹೊತ್ತಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿ, 96.4 ಶತಕೋಟಿ ಡಾಲರ್​ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ 2008 ರಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕತ್ವದೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಗೆ ಪ್ರವೇಶಿಸಿದ್ದರು. ರಿಲಯನ್ಸ್‌ನ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಸೇವೆಯಾದ ಜಿಯೋ ಈಗಾಗಲೇ ಅಂದಾಜು 45 ಕೋಟಿ ಚಂದಾದಾರರನ್ನು ಸೆಳೆದಿದೆ. ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ ವಿಸ್ತರಣೆಯಾಗುತ್ತಿದೆ. ಬ್ಲ್ಯಾಕ್‌ರಾಕ್ ಮತ್ತು ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಜುಲೈ 2023 ರಲ್ಲಿ ಜಿಯೋ ಬ್ಲ್ಯಾಕ್‌ರಾಕ್ ಜಂಟಿ ಉದ್ಯಮ ರಚಿಸುವ ಒಪ್ಪಂದ ಘೋಷಿಸಿವೆ.

- Advertisement -

ಎರಡನೇ ಸ್ಥಾನದಲ್ಲಿ ಗೌತಮ್ ಅದಾನಿ:
ಬಂದರುಗಳು, ವಿಮಾನ ನಿಲ್ದಾಣಗಳು, ಇಂಧನ ವಲಯದಲ್ಲಿ ವ್ಯಾಪಿಸಿರುವ 32 ಬಿಲಿಯನ್ ಡಾಲರ್​ ಉದ್ಯಮವಾಗಿದೆ ಅದಾನಿ ಗ್ರೂಪ್. 1988 ರಲ್ಲಿ ಈ ವ್ಯಾಪಾರ ಸಂಸ್ಥೆ ಪ್ರಾರಂಭವಾಯಿತು. ಭಾರತದ ಪ್ರಮುಖ ವಿಮಾನ ನಿಲ್ದಾಣ ನಿರ್ವಾಹಕರಾಗಿ ಮತ್ತು ಗುಜರಾತ್‌ನ ಮಹತ್ವದ ಮುಂದ್ರಾ ಬಂದರಿನ ನಿಯಂತ್ರಕವಾಗಿ ಅದಾನಿ ಗ್ರೂಪ್​ ಬೆಳೆಯಿತು. ಇದಲ್ಲದೆ, 2022 ರಲ್ಲಿ ಹೊಲ್ಸಿಮ್ ಸ್ವಾಧೀನವು ಅವರನ್ನು ಭಾರತದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕರ ಸ್ಥಾನಕ್ಕೆ ಏರಿಸಿದೆ.

ಫೋರ್ಬ್ಸ್ ಸಂಗ್ರಹಿಸಿದ ಮಾಹಿತಿ ಅನುಸಾರ ಏಷ್ಯಾದ ಟಾಪ್ 10 ಶ್ರೀಮಂತ ವ್ಯಕ್ತಿಗಳು

1) ಮುಖೇಶ್ ಅಂಬಾನಿ (ಭಾರತ)100.2 ಬಿಲಿಯನ್​ ಡಾಲರ್​ ಅಸ್ತಿ

2) ಗೌತಮ್ ಅದಾನಿ (ಭಾರತ) 79.9 ಬಿಲಿಯನ್​ ಡಾಲರ್​ ಅಸ್ತಿ

3) ಝಾಂಗ್ ಶಾನ್ಶನ್ (ಚೀನಾ) 62.4 ಬಿಲಿಯನ್​ ಡಾಲರ್​ ಅಸ್ತಿ

4) ಕಾಲಿನ್ ಝೆಂಗ್ ಹುವಾಂಗ್ (ಚೀನಾ) 53.0 ಬಿಲಿಯನ್​ ಡಾಲರ್​ ಅಸ್ತಿ

5) ಜಾಂಗ್ ಯಿಮಿಂಗ್ (ಚೀನಾ) 43.4 ಬಿಲಿಯನ್​ ಡಾಲರ್​ ಅಸ್ತಿ

6) ಪ್ರಜೋಗೊ ಪಂಗೆಸ್ಟು (ಇಂಡೋನೇಷ್ಯಾ) 43.3 ಬಿಲಿಯನ್​ ಡಾಲರ್​ ಅಸ್ತಿ

7) ತದಾಶಿ ಯಾನೈ ಮತ್ತು ಕುಟುಂಬ (ಜಪಾನ್) 37.5 ಬಿಲಿಯನ್​ ಡಾಲರ್​ ಅಸ್ತಿ

8) ಲಿ ಕಾ-ಶಿಂಗ್ (ಹಾಂಗ್ ಕಾಂಗ್) 35.7 ಬಿಲಿಯನ್​ ಡಾಲರ್​ ಅಸ್ತಿ

9) ಶಿವ ನಾಡರ್ (ಭಾರತ) 33.6 ಬಿಲಿಯನ್​ ಡಾಲರ್​ ಅಸ್ತಿ

10) ಮಾ ಹುವಾಟೆಂಗ್ (ಚೀನಾ) 30.9 ಬಿಲಿಯನ್​ ಡಾಲರ್​ ಅಸ್ತಿ



Join Whatsapp